ಮುಂಬೈ: ಸಂಜು ಸಿನೆಮಾದಲ್ಲಿ ಅಕ್ರಮ ಶಸ್ತ್ರಾಸ್ತ್ರ ಪೂರೈಕೆ ದೃಶ್ಯದಲ್ಲಿ ಕುಖ್ಯಾತ ಭೂಗತ ಪಾತಕಿ ಅಬು ಸಲೇಂನನ್ನು ತೋರಿಸಿದ್ದಕ್ಕಾಗಿ, ಅಬು ಸಲೇಂ ಪರ ವಕೀಲರು ಬಾಲಿವುಡ್ ಸಂಜು ಸಿನೆಮಾದ ನಿರ್ಮಾಣ ವಿಭಾಗದ ಮುಖ್ಯಸ್ಥರಿಗೆ ಲೀಗಲ್ ನೋಟಿಸ್ ನೀಡಿದ್ದಾರೆ.
ಸಂಜು ಚಿತ್ರದಲ್ಲಿ ತನ್ನ ಕಕ್ಷಿದಾರರ ಪರವಾಗಿ ತಪ್ಪು ಮಾಹಿತಿಯನ್ನು ನೀಡಲಾಗಿದೆ ಎಂದು ಆರೋಪಿಸಿ ಸಲೇಂ ಪರ ವಕೀಲರು ನಿರ್ದೇಶಕ ರಾಜ್‍ಕುಮಾರ್ ಹಿರಾನಿ, ವಿಧು ವಿನೋದ್ ಚೋಪ್ರಾ, ವಿತರಕ ಮತ್ತು ನಿರ್ಮಾಪಕರಿಗೆ ನೋಟಿಸ್ ಕಳುಹಿಸಿದ್ದಾರೆ. ಮಾನಹಾನಿ ಉಂಟುಮಾಡುವ ದೃಶ್ಯಗಳನ್ನು ತೆಗೆಯಬೇಕು ಹಾಗೂ 15 ದಿನಗಳಲ್ಲಿ ಚಿತ್ರದಲ್ಲಿರುವ ದೃಶ್ಯಗಳಿಗೆ ಕತ್ತರಿ ಹಾಕದೇ ಇದ್ದಲ್ಲಿ ಮಾನ ನಷ್ಟ ಮೊಕದ್ದಮೆ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ನೋಟಿಸ್‍ನಲ್ಲಿ ಸಂಜು ಚಿತ್ರದ ದೃಶ್ಯವೊಂದರಲ್ಲಿ ಸಂಜಯ್ ಪಾತ್ರಧಾರಿ ತಪ್ಪೊಪ್ಪಿಗೆ ನೀಡುವಾಗ 1993 ರಲ್ಲಿ ಅಕ್ರಮ ಶಸ್ತ್ರಾಸ್ತ್ರ ಮತ್ತು ಯುದ್ಧ ಸಾಮಗ್ರಿಗಳನ್ನು ಪೂರೈಸಿರುವ ಕುರಿತು ನನ್ನ ಕಕ್ಷಿದಾರನ ವಿರುದ್ಧ ಆರೋಪಿಸಲಾಗಿದೆ. ಅಬು ಸಲೇಂ ಯಾವುದೇ ಶಸ್ತ್ರಾಸ್ತ್ರಗಳನ್ನು ಪೂರೈಸಿಲ್ಲ ಎಂದು ವಕೀಲರು ತಿಳಿಸಿದ್ದಾರೆ
ಜೂ. 29ರಂದು ಬಿಡುಗಡೆಯಾಗಿರುವ ಸಂಜು ಸಿನಿಮಾ ಬಾಲಿವುಡ್ ನಟ ಸಂಜಯ್ ದತ್ ಅವರ ಜೀವನಾಧರಿತ ಚಿತ್ರವಾಗಿದ್ದು, ಬಾಕ್ಸ್ ಆಫೀಸ್ ನಲ್ಲಿ ಭಾರೀ ಸದ್ದು ಮಾಡುವ ಮೂಲಕ 339 ಕೋಟಿ ರೂ. ಸಂಗ್ರಹಿಸಿತ್ತು. ಸಂಜು ಸಿನಿಮಾದ ಮುಖ್ಯ ಪಾತ್ರದಲ್ಲಿ ರಣಬೀರ್ ಸಂಜಯ್ ಅವರ ಪಾತ್ರವನ್ನು ನಿರ್ವಹಿಸಿದ್ದಾರೆ.
Comments are closed.