ಮುಂಬೈ

ನಗರ ನಕ್ಸಲ್ ಆರೋಪ: ಗೃಹಬಂಧನದಲ್ಲಿದ್ದ ಐವರು ಮಾನವಹಕ್ಕು ಹೋರಾಟಗಾರರ ಪೈಕಿ ಗೌತಮ್​ ನವ್ಲಾಖ ಬಿಡುಗಡೆ

Pinterest LinkedIn Tumblr


ನವದೆಹಲಿ: ಭೀಮಾ ಕೊರೆಗಾಂವ್​ ಹಿಂಸಾಚಾರ ಪ್ರಕರಣದಲ್ಲಿ ಗೃಹಬಂಧನಕ್ಕೆ ಒಳಪಡಿಸಿದ್ದ ಐವರು ಮಾನವಹಕ್ಕು ಹೋರಾಟಗಾರರ ಪೈಕಿ ಗೌತಮ್​ ನವ್ಲಾಖ ಅವರನ್ನು ಬಿಡುಗಡೆಗೊಳಿಸಿ ದೆಹಲಿ ಹೈಕೋರ್ಟ್​ ಇಂದು ಆದೇಶ ಹೊರಡಿಸಿದೆ.

ಭೀಮಾ ಕೊರೆಗಾಂವ್​ ಹಿಂಸಾಚಾರ ಪ್ರಕರಣದಲ್ಲಿ ಮಾನವ ಹಕ್ಕು ಹೋರಾಟಗಾರರ ಕೈವಾಡವಿದೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಹೈದರಾಬಾದ್​ನಲ್ಲಿ ತೆಲುಗು ಕವಿ ವರವರ ರಾವ್​, ಫರೀದಾಬಾದ್​ನಲ್ಲಿ ಸುಧಾ ಭಾರದ್ವಾಜ್​, ಮುಂಬೈನಲ್ಲಿ ಅರುಣ್​ ಫರೇರಾ ಮತ್ತು ವೆರ್ನನ್​ ಗೋನ್ಸಾಲ್ವೆಸ್​, ದೆಹಲಿಯಲ್ಲಿ ಗೌತಮ್​ ನವ್ಲಾಖ ಅವರನ್ನು ಪೊಲೀಸರು ಬಂಧಿಸಿದ್ದರು. ಅವರನ್ನು ಗೃಹಬಂಧನದಲ್ಲಿಟ್ಟು ವಿಚಾರಣೆ ನಡೆಸಲು ಸುಪ್ರೀಂಕೋರ್ಟ್​ ಆದೇಶ ನೀಡಿತ್ತು.

ಆಪಾದಿತರನ್ನು ಜೈಲಿನಲ್ಲಿ ಬಂಧಿಸದೆ, ಎಸ್​ಐಟಿ ತನಿಖೆಗೂ ನೀಡದೆ ಪುಣೆ ಪೊಲೀಸರೇ ಗೃಹಬಂಧನದಲ್ಲಿಟ್ಟು ತನಿಖೆ ನಡೆಸಬೇಕು ಎಂದು ಸುಪ್ರೀಂಕೋರ್ಟ್​ ಆದೇಶ ನೀಡಿತ್ತು. ಆಪಾದಿತರ ವಿಚಾರಣೆಯನ್ನು ಪೂರ್ತಿಗೊಳಿಸಿರುವ ಕಾರಣ ಇಂದು ಮಾನವ ಹಕ್ಕು ಹೋರಾಟಗಾರ ಗೌತಮ್​ ನವ್ಲಾಖ ಅವರನ್ನು ಗೃಹಬಂಧನದಿಂದ ಬಿಡುಗಡೆಗೊಳಿಸಲಾಗಿದೆ.

ಕಳೆದ ವಾರ ಸುಪ್ರೀಂಕೋರ್ಟ್​ ಗೌತಮ್​ ನವ್ಲಾಖ ಅವರಿಗೆ ನಾಲ್ಕು ವಾರಗಳ ಕಾಲಗಳೊಳಗೆ ತಾನು ನಿರಪರಾಧಿ ಎಂದು ಸಾಬೀತುಪಡಿಸಿಕೊಳ್ಳಲು ಅವಕಾಶ ನೀಡಿತ್ತು. ಅದರಂತೆ ಅಫಿಡವಿಟ್​ ಸಲ್ಲಿಸಿರುವ ಗೌತಮ್​ ಅವರನ್ನು ಗೃಹಬಂಧನದಿಂದ ಬಿಡುಗಡೆಗೊಳಿಸಲಾಗಿದೆ.

Comments are closed.