ಮುಂಬೈ

ಸ್ಮಾರ್ಟ್​​ಪೋನ್​​​ ಮೂಲಕವೇ ಎಟಿಎಂ ಪಾಸ್​​ವರ್ಡ್​​​​ ಕದ್ದು ಹಣ ಕಳವು: ಪೊಲೀಸರಿಗೆ ಸಿಕ್ಕಿಬಿದ್ದದ್ದು ಹೇಗೆ?

Pinterest LinkedIn Tumblr


ನವದೆಹಲಿ: ದೇಶದಲ್ಲಿ ಡಿಜಿಟಲ್ ಬ್ಯಾಂಕಿಗ್ ಬಳಕೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಮೊಬೈಲ್ ಮೂಲಕ ಬ್ಯಾಂಕ್ ವ್ಯವಹಾರ ನಡೆಸುವವರ ಸಂಖ್ಯೆಯೂ ಏರುಗತಿಯಲ್ಲಿ ಸಾಗುತ್ತಿದೆ. ಈ ಮೊದಲು ಕರೆ ಮಾಡಿ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ ಗಳ ಮಾಹಿತಿ ಪಡೆದು ವಂಚಿಸುತ್ತಿದ್ದವರು. ಆದರೀಗ ಹ್ಯಾಕರ್ಸ್​​ಗಳು ಸ್ಮಾರ್ಟ್​​ಪೋನ್​​​ ಮೂಲಕವೇ ಎಟಿಎಂ ಪಾಸ್​​ವರ್ಡ್​​​​ ಕದ್ದು ಹಣ ಕಳವು ಮಾಡುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ.

ಇದೇ ಮಾದರಿಯಲ್ಲಿ ಮುಂಬೈ ಮೂಲದ ಇಬ್ಬರು ಖತರ್ನಾಕ್​​ ಕಳ್ಳರು ಎಟಿಎಂ ಪಾಸ್​ವರ್ಡ್​​ ಕದ್ದು ಹಣ ಲಪಟಾಯಿಸಿರುವ ಘಟನೆ ಥಾಣೆಯಲ್ಲಿ ನಡೆದಿದೆ. ಥಾಣೆ ಪೊಲೀಸರು ಇಬ್ಬರು ಕಳ್ಳರನ್ನು ಬಂಧಿಸುವ ಮೂಲಕ ಎಟಿಎಂ ಕಾರ್ಡ್‌ ಸ್ಕಿಮ್ಮಿಂಗ್‌ ಜಾಲವನ್ನು ಭೇದಿಸಿದ್ದಾರೆ. ಅಲ್ಲದೇ ಮತ್ತಷ್ಟು ಕಳ್ಳರನ್ನು ಬಂಧಿಸಲು ಆರೋಪಿಗಳ ವಿಚಾರಣೆ ನಡೆಸುತ್ತಿದ್ಧಾರೆ.

ಬಂಧಿತ ಆರೋಪಿಗಳು ವಾಣಿಜ್ಯ ನಗರಿ ಮುಂಬೈ ಮೂಲದ ಕಿಶೋರ್‌ ನಯ್ಯ (33) ಮತ್ತು ಹೇಮಂತ್‌ ಜೈನ್‌ (32) ಎಂದು ಗುರುತಿಸಲಾಗಿದೆ. ಇಬ್ಬರು ಕಳ್ಳರು ಸ್ಮಾರ್ಟ್​​ಪೋನ್​​ ಮೂಲಕವೇ ಮೀರಾ ಭಯಾಂದರ್‌ ಟೌನ್‌ಶಿಪ್‌ ಬ್ಯಾಂಕ್‌ ಖಾತೆದಾರರ ಎಟಿಎಂ ಪಾಸ್‌ ವರ್ಡ್‌ಗಳನ್ನು ಕದಿಯುತ್ತಿದ್ದರು. ಬಳಿಕ ಅವರ ಖಾತೆಯಿಂದ ಹಣ ಲಪಟಾಯಿಸುತ್ತಿದ್ದರು ಎಂದು ಪೊಲೀಸರು ತಿಳಿದು ಬಂದಿದೆ.

ಮೀರಾ ಭಯಾಂದರ್‌ ಟೌನ್‌ಶಿಪ್‌ ಬ್ಯಾಂಕ್‌ ಖಾತೆದಾರರು, ನಮ್ಮ ಹಣ ಆನ್​​ಲೈನ್​​ ಮೂಲಕ ಕಳವು ಮಾಡಲಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ಬಳಿಕ ದೂರಿನ ಆಧಾರದ ಮೇಲೆ ತನಿಖೆಗೆ ಮುಂದಾದ ಪೊಲೀಸರು ಮುಂಬೈ ಮೂಲದ ಇಬ್ಬರು ಆನ್​ಲೈನ್​​ ಕಳ್ಳರನ್ನು ಬಂಧಿಸಿದ್ಧಾರೆ. ಅಲ್ಲದೇ ಇವರನ್ನು ವಿಚಾರಣೆಗೆ ಒಳಪಡಿಸಿದ್ದೇವೆ ಎಂದು ಥಾಣೆ ಜಿಲ್ಲಾ ಗ್ರಾಮಾಂತರ ಎಸ್‌ಪಿ ಡಾ. ಶಿವಾಜಿ ರಾಥೋಡ್‌ ತಿಳಿಸಿದ್ದಾರೆ.

ನೋಟು ನಿಷೇಧದ ಬಳಿಕ ಹೆಚ್ಚಾದ ಹ್ಯಾಕರ್ಸ್​ಗಳು:

ನೋಟು ನಿಷೇಧದ ನಂತರದ ದಿನದಲ್ಲಿ ಹ್ಯಾಕರ್ಸ್‌ಗಳು ಮೊಬೈಲ್ ಮೂಲಕ ನಡೆಯುತ್ತಿರುವ ಬ್ಯಾಂಕಿಗ್ ಮೇಲೆ ಕಣ್ಣಿಟ್ಟಿದ್ದರು. ಕ್ಷಣಕಾಲ ಎಚ್ಚರ ತಪ್ಪಿದರು ನಮ್ಮ ಆಕೌಂಟಿನಿನಲ್ಲಿರುವ ಹಣವೆಲ್ಲ ದೊಚಿಬಿಡುತ್ತಿದ್ದರು. ಈ ಹಿಂದೆಯೂ ಎಕಾನಾಮಿಕ್ಸ್ ಟೈಮ್ಸ್ ವರದಿ ಮಾಡಿದಂತೇ, ನಿಮ್ಮ ಪೋನಿನಲ್ಲಿರುವ ಮಾಹಿತಿಗಳನ್ನು ಹ್ಯಾಕರ್ಸ್​​ಗಳು ಕದಿಯುತ್ತಿದ್ದರು. ಅವರಿಗೆ ಬೇಕಾದ ಮಾಹಿತಿ ವಾಟ್ಸಪ್​ನಲ್ಲಿ ಸಿಗುತ್ತಿತ್ತು. ನಂತರ ಹಣ ಲಪಟಾಯಿಸುತ್ತಿದ್ದರು ಎಂದು ವರದಿಯಲ್ಲಿ ಉಲ್ಲೇಖವಾಗಿದೆ.

ವಾಟ್ಸಪ್​​​ಗೆ ಹ್ಯಾಕರ್ಸ್​​ಗಳ ನುಸುಳಿಕೆ:

ವಾಟ್ಸಪ್ ಇಂದಿನ ದಿನದಲ್ಲಿ ಹೆಚ್ಚಿನ ಖ್ಯಾತಿ ಪಡೆದಿರುವ ಕಾರಣ ಹ್ಯಾಕರ್ಸ್ ಆ ಮೂಲಕ ನಿಮ್ಮ ಸ್ಮಾರ್ಟ್‌ಪೋನು ಪ್ರವೇಶಿಸಲು ಮುಂದಾಗುತ್ತಿದ್ದಾರೆ. ವಾಟ್ಸಪ್‌ಗೆ WhatsApp messages, Excel, Word, and PDF filesಗಳನ್ನು ಕಳುಹಿಸುವ ಮೂಲಕ ಅದನ್ನು ಓಪನ್ ಮಾಡುವಂತೆ ನಿಮ್ಮ ಪ್ರೇರಿಪಿಸಿ ನಿಮ್ಮ ಪೋನಿನ ಒಳ ನುಸುಳಲು ಯತ್ನಿಸುತ್ತಿದ್ಧಾರೆ ಎನ್ನಲಾಗಿದೆ.

ಶಂಕಿತ ಲಿಂಕ್​​ ತೆರೆಯದೇ ಎಚ್ಚರವಹಿಸಿ:

ನಿಮಗೆ ಅನುಮಾನ ಬರುವ ಯಾವುದೇ ಲಿಂಕ್ ಗಳನ್ನು ಪೋನಿನಲ್ಲಿ ಓಪನ್ ಮಾಡಲು ಹೋಗದಿರಿ. ಮಾಡಿದರೆ ನಿಮ್ಮ ಪೋನಿನ ಮೇಲೆ ದಾಳಿ ಮಾಡುವ ಹ್ಯಾಕರ್ಸ್ ನಿಮ್ಮ ಹಣವನ್ನು ಲಪಟಾಯಿಸುವುದಂತೂ ಖಂಡಿತ. ಹೀಗಾಗಿ ನಿಮ್ಮ ಗೊತ್ತಿರದ ಡಾಕುಮೆಂಟ್‌ಗಳು ಅಪರಿಚಿತರಿಂದ ಬಂದರೆ ತೆರೆಯಲು ಹೋಗದೇ ಎಚ್ಚರವಹಿಸಿ.

Comments are closed.