ಮುಂಬೈ: ಮುಂಬೈನ ಅಜ್ಞಾತ ಸ್ಥಳದಿಂದ ಶಾಸಕ ಎಂ.ಟಿ.ಬಿ. ನಾಗರಾಜ್ ರಾಮಲಿಂಗಾರೆಡ್ಡಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ, ವೀಡಿಯೋ ರಿಲೀಸ್ ಮಾಡಿದ್ದಾರೆ.
ರಾಮಲಿಂಗಾರೆಡ್ಡಿ ರಾಜೀನಾಮೆ ಹಿಂಪಡೆದಿದ್ದಕ್ಕೆ ಬೇಸರ ವ್ಯಕ್ತಪಡಿಸಿದ ಎಂಟಿಬಿ, ರಾಮಲಿಂಗಾರೆಡ್ಡಿ ನಿರ್ಧಾರ ನಮಗೆ ಆಘಾತವನ್ನುಂಟು ಮಾಡಿದೆ ಎಂದಿದ್ದಾರೆ.
ರಾಮಲಿಂಗಾರೆಡ್ಡಿ ಅವರು ನಮ್ಮ ಆತ್ಮೀಯ ಸ್ನೇಹಿತರು. ನಿನ್ನೆನೇ ರಾಮಲಿಂಗಾರೆಡ್ಡಿ ಅವರ ನಿರ್ಧಾರದ ಬಗ್ಗೆ ಸೋಮಶೇಖರ್ ಪತ್ರಿಕಾ ಹೇಳಿಕೆ ನೀಡಿದ್ದಾರೆ. ಆದ್ರೆ ರಾಮಲಿಂಗಾರೆಡ್ಡಿ ಅವರ ನಿರ್ಧಾರ ನಮಗೆ ದೊಡ್ಡ ಆಘಾತವನ್ನೇ ತಂದಿದೆ ಎಂದಿದ್ದಾರೆ.
ಈ ಬೇಸರಕ್ಕೆ ಕಾರಣ, ನಾವೆಲ್ಲ ಶಾಸಕರು ರಾಮಲಿಂಗಾರೆಡ್ಡಿಯವರ ನೇತೃತ್ವದಲ್ಲಿ ಸಭೆ ನಡೆಸಿ, ಮೂರು, ನಾಲ್ಕು ಬಾರಿ ಚರ್ಚೆ ನಡೆಸಿ, ಕಾಂಗ್ರೆಸ್‌ನಲ್ಲಿ ನಮಗೆ ಅನ್ಯಾವಾಗಿದೆಯೆಂದು ಬೇಸರಗೊಂಡು ರಾಜೀನಾಮೆ ನೀಡಲು ತೀರ್ಮಾನಿಸಿದ್ದೇವು. ಆದ್ರೆ ರಾಮಲಿಂಗಾರೆಡ್ಡಿ ಈ ಬಗ್ಗೆ ಯೋಚಿಸದೇ, ರಾಜೀನಾಮೆ ಹಿಂಪಡೆದಿದ್ದಾರೆ ಎಂಟಿಬಿ ಅಸಮಾಧಾನ ಹೊರಹಾಕಿದ್ದಾರೆ.
Comments are closed.