ಇಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳು ಕಟ್ಟಡವೊಂದರ 15ನೇ ಅಂತಸ್ತಿನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮುಂಬೈನ ಭಂಡಪ್‌ನಲ್ಲಿ ನಡೆದಿದೆ.
ಇಂಜಿನಿಯರಿಂಗ್ ಮೊದಲ ವರ್ಷದಲ್ಲಿ ಕಲಿಯುತ್ತಿದ್ದ ವಿದ್ಯಾರ್ಥಿನಿ ಶನಿವಾರದಂದು ಭಂಡಪ್‌ನಲ್ಲಿರುವ ಡ್ರೀಮ್ಸ್ ಬಿಲ್ಡಿಂಗ್‌ನಲ್ಲಿ ಲಿಫ್ಟ್ ಹತ್ತಿರ ಇರುವ ಖಾಲಿ ಜಾಗದಿಂದ ಹಾರಿದ್ದಾಳೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ವಿದ್ಯಾರ್ಥಿನಿಯ ಪೋಷಕರು ಹೇಳುವಂತೆ ಅವಳಿಗೆ ಓದುವ ವಿಷಯದಲ್ಲಿ ಅವಳ ತಂದೆ ಶುಕ್ರವಾರ ಬೈದಿದ್ದರಂತೆ. ಅದಕ್ಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಅನುಮಾನಿಸಲಾಗಿದೆ. ಆದರೆ ಎಲ್ಲಾ ಆಯಾಮದಿಂದಲೂ ತನಿಖೆ ಮಾಡುವುದಾಗಿ ಪೊಲೀಸರು ಹೇಳಿದ್ದಾರೆ.
Comments are closed.