ಮುಂಬೈ: ಮಹಾರಾಷ್ಟ್ರದಲ್ಲಿ ಸರಕಾರ ರಚನೆಯ ಸರ್ಕಸ್ ಇದೀಗ ಹೊಸದೊಂದು ತಿರುವನ್ನು ಪಡೆದುಕೊಂಡಿದೆ. ನಮ್ಮ ಬಳಿ ಸರಕಾರ ರಚಿಸಲು ಬೇಕಾಗಿರುವಷ್ಟು ಸಂಖ್ಯಾಬಲ ಇಲ್ಲದಿರುವುದರಿಂದ ನಾವು ನೂತನ ಸರಕಾರ ರಚನೆಗೆ ಹಕ್ಕು ಮಂಡಿಸುವುದಿಲ್ಲ ಎಂದು ಬಿಜೆಪಿ ಸ್ಪಷ್ಟಪಡಿಸಿದ ಬೆನ್ನಲ್ಲೇ ರಾಜ್ಯಪಾಲರು ಶಿವಸೇನೆಗೆ ಸರಕಾರ ರಚಿಸಲು ಆಹ್ವಾನ ನೀಡಿದ್ದರು.
ತಮ್ಮನ್ನು ಭೇಟಿಯಾಗಲು ಶಿವಸೇನಾ ನಾಯಕರಿಗೆ ರಾಜ್ಯಪಾಲರು ಸೋಮವಾರ ಸಂಜೆ ನೀಡಿದ್ದ ಸಮಯಾವಕಾಶದಲ್ಲಿ ಅವರನ್ನು ಭೇಟಿಯಾಗಿದ್ದ ಶಿವಸೇನೆಯ ಯುವ ನಾಯಕ ಆದಿತ್ಯ ಠಾಕ್ರೆ ಅವರು ತಮ್ಮ ಪಕ್ಷಕ್ಕೆ ಸರಕಾರ ರಚಿಸಲು ಮೂರು ದಿನಗಳ ಕಾಲಾವಕಾಶವನ್ನು ಕೇಳಿದ್ದರು. ಆದರೆ ಆದಿತ್ಯ ಠಾಕ್ರೆ ಅವರ ಈ ಮನವಿಯನ್ನು ರಾಜ್ಯಪಾಲರು ತಿರಸ್ಕರಿಸಿದ್ದಾರೆ.
ಈತನ್ಮಧ್ಯೆ ರಾಜ್ಯಪಾಲರು ಬಿಜೆಪಿ ಮತ್ತು ಶಿವಸೇನೆಯ ಬಳಿಕ ಅತೀದೊಡ್ಡ ಪಕ್ಷವಾಗಿರುವ ಎನ್.ಸಿ.ಪಿ.ಯನ್ನು ಸರಕಾರ ರಚನೆಗೆ ಆಹ್ವಾನಿಸಿದ್ದಾರೆ. ರಾಜ್ಯಪಾಲರಾಗಿರುವ ಭಗತ್ ಸಿಂಗ್ ಕೋಶ್ಯಾರಿ ಅವರು ಎನ್.ಸಿ.ಪಿ. ನಾಯಕ ಅಜಿತ್ ಪವಾರ್ ಅವರಿಗೆ ನೂತನ ಸರಕಾರ ರಚನೆಗೆ ಹಕ್ಕು ಮಂಡಿಸುವಂತೆ ಸೂಚನೆ ನೀಡಿದ್ದಾರೆ. ಮತ್ತು ಸರಕಾರ ರಚನೆಗೆ ಅಗತ್ಯವಿರುವಷ್ಟು ಶಾಸಕರ ಬಲ ತನ್ನಲ್ಲಿದೆ ಎಂಬುದನ್ನು ರಾಜ್ಯಪಾಲರಿಗೆ ಮನವರಿಕೆ ಮಾಡಿಕೊಡಲು ಎನ್.ಸಿ.ಪಿ.ಗೆ ಮಂಗಳವಾರ ರಾತ್ರಿ 8.30ರವರೆಗೆ ಸಮಯಾವಕಾಶವನ್ನು ಕೋಶ್ಯಾರಿ ಅವರು ನೀಡಿದ್ದಾರೆ.
Comments are closed.