ಮುಂಬಯಿ: ಮಹೀಂದ್ರಾ ಗ್ರೂಪ್ ಕಾರ್ಯನಿರ್ವಾಹಕ ಅಧ್ಯಕ್ಷ ಸ್ಥಾನದಲ್ಲಿರುವ ಆನಂದ್ ಮಹೀಂದ್ರಾ ಅವರು 2020ರ ಏಪ್ರಿಲ್ 1ಕ್ಕೆ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುತ್ತಿದ್ದಾರೆ ಎಂದು ಸಂಸ್ಥೆ ತಿಳಿಸಿದೆ.
ಸೆಬಿ ಮಾರ್ಗಸೂಚಿಗಳ ಪ್ರಕಾರ ಆನಂದ್ ಮಹೀಂದ್ರಾ ಅವರು 2020ರ ಏಪ್ರಿಲ್ 1ರಿಂದ ಮಹೀಂದ್ರಾ ಮಹೀಂದ್ರಾ ಮಂಡಳಿಯ ಕಾರ್ಯನಿರ್ವಾಹಕ ಅಧ್ಯಕ್ಷ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ ಎಂದು ಸಂಸ್ಥೆ ಹೇಳಿಕೆ ಬಿಡುಗಡೆ ಮಾಡಿದೆ.ನೂತನ ಅಧ್ಯಕ್ಷ್ಯ ಪವನ್ ಗೋಯೆಂಕಾ ಅವರು ಏಪ್ರಿಲ್ 1ರಿಂದ ಮತ್ತೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧ್ಯಕ್ಷರಾಗಲಿದ್ದಾರೆ.
ಇನ್ನೂ ಆನಂದ್ ಮಹೀಂದ್ರಾ ಕಾರ್ಯನಿರ್ವಾಹಕ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಬಳಿಕ ಮಹೀಂದ್ರಾ ಸಂಸ್ಥೆಯ ಮಾರ್ಗದರ್ಶಿಯಾಗಿ ಮತ್ತು ಆಡಳಿತ ಮಂಡಳಿ ನಿರ್ದೇಶಕರಾಗಿ ಸೇವೆ ಸಲ್ಲಿಸಲಿದ್ದಾರೆ. ಮುಖ್ಯವಾಗಿ ತಂತ್ರಗಾರಿಕೆ ಯೋಜನೆ, ಸಂಸ್ಥೆಯಲ್ಲಿನ ಸಮಸ್ಯೆಗಳ ಬಗೆಹರಿಸುವಿಕೆ ಮತ್ತು ಬಾಹ್ಯ ಸಂಪರ್ಕ ಕೊಂಡಿಯಾಗಿ ಸೇವೆ ಸಲ್ಲಿಸಲಿದ್ದಾರೆ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ.
Comments are closed.