ಮುಂಬೈ: ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿ ಹಾಗೂ ಅವರ ಪತ್ನಿ ಮೇಲೆ ದಾಳಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಗುರುವಾರ ಬಂಧನಕ್ಕೊಳಪಡಿಸಿದ್ದಾರೆ.
ಟಿವಿ ಸ್ಟುಡಿಯೋದಿಂದ ಮನೆಗೆ ತೆರಳುತ್ತಿದ್ದ ಅರ್ನಬ್ ಹಾಗೂ ಅವರ ಪತ್ನಿ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದರು. ಅದೃಷ್ಟವಶಾತ್ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದರು.
ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಇದೀಗ ಇಬ್ಬರು ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದು, ಇಬ್ಬರ ವಿರುದ್ಧ ಭಾರತೀಯ ಸಂವಿಧಾನದ ಕಾಯ್ದೆ 341 ಮತ್ತು 504 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.
ದಾಳಿ ಸಂಬಂಧ ಗೋಸ್ವಾಮಿಯವರು ಪೊಲೀಸರಿಗೆ ದೂರು ನೀಡಿದ್ದಾರೆ. ವೊರ್ಲಿಯಲ್ಲಿರುವ ಟಿವಿ ಕಚೇರಿಯಿಂದ ಮನೆಗೆ ತೆರಳಿತ್ತಿದ್ದ ಸಂದರ್ಭದಲ್ಲಿ ನನ್ನ ಮೇಲೆ ಹಾಗೂ ಪತ್ನಿ ಮೇಲೆ ದಾಳಿ ನಡೆಸಲಾಗಿದೆ. ಮಧ್ಯರಾತ್ರಿ 12.15ರ ಸುಮಾರಿಗೆ ಗಣಪತ್ರಾವ್ ಕದಮ್ ಮಾರ್ಗ್ ಪ್ರದೇಶದಲ್ಲಿ ತೆರಳುವ ವೇಳೆ ಬೈಕ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಲು ಕಾರಿನ ಮೇಲೆ ದಾಳಿ ನಡೆಸಿದ್ದರು.
ಬೈಕ್ ನಲ್ಲಿದ್ದ ವ್ಯಕ್ತಿಯೊಬ್ಬ ನನ್ನನ್ನು ಬೆಟ್ಟು ಮಾಡಿ ತೋರಿಸಿ ಕಾರಿನ ಮುಂದೆ ಬೈಕ್ ನಿಲ್ಲಿಸಿ ಅಡ್ಡಗಟ್ಟಿದ್ದರು. ಚಾಲಕನ ಸೀಟ್ ಬಳಿಯಿದ್ದ ಕಿಟಿಕಿಗೆ ಸಾಕಷ್ಟು ಬಾರಿ ಹೊಡೆದರು. ಬಳಿಕ ಕಿಟಕಿ ಗಾಜುಗಳನ್ನು ಒಡೆಯಲು ಸಾಧ್ಯವಾಗಲಿಲ್ಲ. ನಂತರ ತಮ್ಮ ಬಳಿಯಿದ್ದ ಬಾಟಲಿ ತೆಗೆದು ಅದರಲ್ಲಿದ್ದ ದ್ರವದ ರೀತಿಯ ವಸ್ತುವನ್ನು ಕಾರಿನ ಮೇಲೆಲ್ಲಾ ಸುರಿದು, ಬಾಯಿಗೆ ಬಂದ ರೀತಿಯಲ್ಲಿ ನಿಂದಿಸುತ್ತಿದ್ದರು ಗೋಸ್ವಾಮಿ ದೂರಿನಲ್ಲಿ ಹೇಳಿಕೊಂಡಿದ್ದಾರೆ.
ಈ ನಡುವೆ ಬಂಧಿತರ ಕುರಿತಂತೆಯೂ ಹೇಳಿಕೆ ನೀಡಿರುವ ಗೋಸ್ವಾಮಿ, ದಾಳಿಕೋರರುು ಯುವ ಕಾಂಗ್ರೆಸ್ ಸದಸ್ಯರೆಂದು ವಿಚಾರಣೆ ವೇಲೆ ಹೇಳಿಕೊಂಡಿದ್ದಾರೆಂದು ತಿಳಿದುಬಂದಿದೆ ಎಂದು ಹೇಳಿದ್ದಾರೆ.
Comments are closed.