ಮುಂಬೈ: ಜಿಮ್ ಟ್ರೈನರ್ ಒಬ್ಬ ಫಿಲಂ ಡೈಲಾಗ್ ಹೇಳುತ್ತಲೇ ತಂದೆಯನ್ನೇ ಬರ್ಬರವಾಗಿ ಕೊಲೆಗೈದ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ.
ನಾಗ್ಪುರದ ಹುಡ್ಕೇಶ್ವರ ಪ್ರದೇಶದ ನಿವಾಸಿ ವಿಜಯ್ (55) ಕೊಲೆಯಾದ ತಂದೆ. ವಿಕ್ರಾಂತ್ ಪಿಲ್ಲೆವಾರ್ (25) ಕೊಲೆಗೈದ ಆರೋಪಿ. ಶನಿವಾರ ರಾತ್ರಿ ಈ ಘಟನೆ ನಡೆದಿದ್ದು, ನಾಗ್ಪುರದ ಜನರನ್ನು ಬೆಚ್ಚಿಬೀಳಿಸಿದೆ.
ಆರೋಪಿ ಕುಟುಂಬದ ಹೇಳಿಕೆ ಪ್ರಕಾರ, “ವಿಕ್ರಾಂತ್ ವಿನಾಕಾರಣ ಏಕಾಏಕಿ ಕೋಪಗೊಂಡು ತಂದೆ ವಿಜಯ್ ಕುತ್ತಿಯನ್ನು ಬಲವಾಗಿ ಕಚ್ಚಿದ್ದರಿಂದ ರಕ್ತಸ್ರಾವ ಆರಂಭವಾಯಿತು. ನಂತರ ತಂದೆಯನ್ನು ಮನೆಯ ಮೇಲೆ ಎಳೆದುಕೊಂಡು ಹೋಗಿ ಮರ್ಮಾಂಗವನ್ನು ಕತ್ತರಿಸಿ ವಿಕೃತಿ ಮೆರೆದಿದ್ದಾನೆ. ಅಷ್ಟಕ್ಕೆ ಬಿಡದೇ ಕೊಚ್ಚಿ ಕೊಚ್ಚಿ ಕೊಲೆಗೈದಿದ್ದಾನೆ” ಎಂದು ನಾಗ್ಪುರ ಪೊಲೀಸರು ತಿಳಿಸಿದ್ದಾರೆ.
“ಜಿಮ್ ತರಬೇತುದಾರ ವಿಕ್ರಾಂತ್ ತಂದೆಯನ್ನು ಕೊಲೆ ಮಾಡುವಾಗ ಹಿಂದಿ ಸಿನಿಮಾದ ಟೈಲಾಗ್ ಹೇಳುತ್ತಲೇ ಇದ್ದ. ಆ ಸಮಯದಲ್ಲಿ ವಿಕ್ರಾಂತ್ ಕ್ರೌರ್ಯವು ಹೇಳಲು ಸಾಧ್ಯವಾಗದ ರೀತಿಯಲ್ಲಿತ್ತು. ಈ ವೇಳೆ ನಾವು ಮಧ್ಯಪ್ರವೇಶಿಸಲು ಪ್ರಯತ್ನಿಸಿದ್ದಕ್ಕೆ ನಮ್ಮನ್ನೇ ಬೆದರಿಸಿದ್ದ” ಎಂದು ಆರೋಪಿಯ ತಾಯಿ ಮತ್ತು ಸಹೋದರಿ ಪೊಲೀಸರಿಗೆ ದೂರಿದ್ದಾರೆ.
ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಆತನನ್ನು ಬಂಧಿಸಲು ಹರಸಾಹಸಪಟ್ಟರು. ಆತನನ್ನು ಮನೆಯಿಂದ ಕೆಳಗಿಳಿಸಲು ಮತ್ತು ಬಂಧಿಸಲು ಐದು ಪೊಲೀಸರು ಸಾಕಷ್ಟು ಪ್ರಯತ್ನ ನಡೆಸಿ ಕೊನೆಗೆ ಬಂಧಿಸಿದ್ದಾರೆ ಎಂದು ಹುಡ್ಕೇಶ್ವರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ರಾಜ್‍ಕಮಲ್ ವಾಘಮರೆ ಹೇಳಿದ್ದಾರೆ.
Comments are closed.