ಮುಂಬೈ

ಮಟ್ಕಾ ಕಿಂಗ್​​​​ ಅಥವಾ ‘ಒಸಿ ಕಿಂಗ್​​‘ ರತನ್​​ ಖತ್ರಿ ನಿಧನ

Pinterest LinkedIn Tumblr


ಮುಂಬೈ(ಮೇ.10): ಒಂದು ಕಾಲದಲ್ಲಿ ಬಾಂಬೆ ಭೂಗತ ಲೋಕವನ್ನು ತನ್ನ ಹಿಡಿತದಲ್ಲಿಟ್ಟುಕೊಂಡು ಮಟ್ಕಾ ವ್ಯಾಪರದ ಮೂಲಕವೇ ಕೋಟ್ಯಾಂತರ ರೂಪಾಯಿ ವ್ಯವಹಾರ ನಡೆಸುತ್ತಿದ್ದ ಮಟ್ಕಾ ಕಿಂಗ್​​​​ ರತನ್​​ ಖತ್ರಿ(80) ಕೊನೆಯುಸಿರೆಳೆದಿದ್ದಾರೆ. ಹಲವು ದಿನಗಳಿಂದ ವಯೋಸಹಜ ಸಮಸ್ಯೆ ಮತ್ತು ಅನಾರೋಗ್ಯದಿಂದ ಬಳಲುತ್ತಿದ್ದ ಮಟ್ಕಾ ಕಿಂಗ್ ಈಗ ಸಾವನ್ನಪ್ಪಿದ್ದಾರೆ.​​

ಬಾಂಬೆ ಮೂಲದ ರತನ್​​ ಕತ್ರಿ ಮಟ್ಕಾ ಆರಂಭಿಸಿದ. ಮೊಬೈಲ್​​, ಪೋಜರ್​​ ಇಲ್ಲದ ಕಾಲದಲ್ಲೇ ಮಟ್ಕಾ ವ್ಯಾಪರದ ಮೂಲಕ ಕೋಟ್ಯಾಂತರ ರೂ. ವ್ಯವಹಾರ ನಡೆಸುತ್ತಿದ್ದ. ಇದಕ್ಕಾಗಿ ನೂರಾರು ಕಿ.ಮೀ ದೂರ ಕಾಲಲ್ಲೇ ನಡೆದುಕೊಂಡು ವ್ಯಾಪರ ಮಾಡುವ ಮೂಲಕ ಭಾರೀ ಜನಪ್ರಿಯನಾಗಿದ್ದ.

ಅಂದು ಎಕ್ಸ್​ಪ್ರೆಸ್​ ಟ್ರಾಂಕಲ್​​ ಮಾಡಲು ಕನಿಷ್ಠ ಹತ್ತು ನಿಮಿಷ ಬೇಕಾಗುತ್ತಿತ್ತು. ಅಂತಹ ಸಂದರ್ಭದಲ್ಲೂ ರತನ್​​ ಕತ್ರಿ ಮಾಡುತ್ತಿದ್ದ ಮಟ್ಕಾದ ಡ್ರಾಗಳು ಬೆಂಗಳೂರಿನಲ್ಲಿ ಭಾರೀ ಸದ್ದು ಮಾಡುತ್ತಿತ್ತು. ಅವನು ಓಪನಿಂಗ್​​ ನಂಬರ್​​ ತೆಗೆಯುವ ಮೊದಲೇ ಒಂದಿಷ್ಟು ವ್ಯವಹಾರ ಆಗುತ್ತಿತ್ತ. ಅಷ್ಟರ ಮಟ್ಟಿಗೆ ರತನ್​​​ ದಂಧೆಕೋರನಾಗಿ ಜನಪ್ರಿಯನಾಗಿದ್ದ.

ಈತನಿಂದ ಮನೆಹಾಳು ಆಟ ಎಂದೇ ಕುಖ್ಯಾತಿಯಾಗಿರುವ ಮಟ್ಕಾ ಅಥವಾ ಓಸಿ ಅರ್ಥಾತ್ ಓಪನ್ ಅಂಡ್ ಕ್ಲೋಸ್ ನಂಬರ್ ಗೇಮ್ ಹಿಂದೆ ಬಿದ್ದು ಎದ್ದವರು ಕಡಿಮೆ. ನಗರ, ಪಟ್ಟಣ, ಹಳ್ಳಿ, ಗಲ್ಲಿ ಗಲ್ಲಿಗಳಲ್ಲಿ ಮಟ್ಕಾ ಅಡ್ಡಾಗಳಿವೆ. ಬಾಂಬೆಯಿಂದ ಶುರು ಮಾಡಿದರೇ ದೇಶದ ತುದಿ ರಾಜ್ಯ ಪಂಜಾಬ್​​ವರೆಗೂ ಒಸಿ ದಂಧೆ ಅವ್ಯಾಹತವಾಗಿ ಹರಡಿದೆ.

Comments are closed.