ಮನೋರಂಜನೆ

ನನ್ನ ಸ್ತನಗಳು ದೊಡ್ಡದಾಗಿಲ್ಲ. ಹೊಟ್ಟೆ ಸಮತಟ್ಟಾಗಿಲ್ಲ ಎಂದ ನಟಿ ಇಲಿಯಾನಾ!

Pinterest LinkedIn Tumblr


ಮುಂಬೈ: ನಟಿ ಇಲಿಯಾನಾ ತಮ್ಮ ಖಾಸಗಿ ಅಂಗಗಳ ಕುರಿತು ಮಾತನಾಡುವ ಮೂಲಕ ಭಾರಿ ಸುದ್ದಿಯಾಗಿದ್ದಾರೆ.

ಇನ್​ಸ್ಟಾಗ್ರಾಂನಲ್ಲಿ ಬಿಕಿನಿ ಫೋಟೋ ಫೋಸ್ಟ್​ ಮಾಡಿರುವ ಇಲಿಯಾನ, ನಾನು ಹೇಗೆ ಕಾಣುತ್ತಿದ್ದೇನೆ ಎನ್ನುವುದರ ಬಗ್ಗೆ ಯಾವಾಗಲೂ ಚಿಂತಿಸುತ್ತೇನೆ. ನನ್ನ ಸೊಂಟ ತುಂಬಾ ಅಗಲವಿದೆ. ತೊಡೆಗಳು ತುಂಬಾ ಅಲುಗಾಡುತ್ತವೆ. ಸ್ತನಗಳು ಸಾಕಷ್ಟು ದೊಡ್ಡದಾಗಿಲ್ಲ. ಮೂಗು ನೇರವಾಗಿಲ್ಲ. ಹೊಟ್ಟೆ ಸಾಕಷ್ಟು ಸಮತಟ್ಟಾಗಿಲ್ಲ. ನನ್ನ ಪೃಷ್ಠ (ನಿಂತಂಬ) ತುಂಬಾ ದೊಡ್ಡದು. ನನ್ನ ತೋಳುಗಳು ಸಹ ಕುಲುಕುತ್ತವೆ. ತುಟಿಗಳು ಸಾಕಷ್ಟು ತುಂಬಿಲ್ಲ ಎಂದು ಯೋಚಿಸುತ್ತೇನೆಂದು ಬರೆದುಕೊಂಡಿದ್ದಾರೆ.

ಮುಂದುವರಿದು ನಾನು ಸಾಕಷ್ಟು ಎತ್ತರವಾಗಿಲ್ಲ. ಮುದ್ದಾಗಿಯೂ ಇಲ್ಲ. ತುಂಬಾ ತುಂಟಿಯೇನಲ್ಲ. ಸ್ಮಾರ್ಟ್​ ಕೂಡ ಅಲ್ಲ. ಇನ್ನು ತುಂಬಾ ಪರ್ಫೆಕ್ಟ್​ ಅಂತೂ ಇಲ್ಲ. ಎಂದಿಗೂ ನಾನು ಪರಿಪೂರ್ಣ ಎಂದು ಅರ್ಥೈಸಿಕೊಳ್ಳಲಿಲ್ಲ ಎಂದು ಇಲಿಯಾನಾ ಸುದೀರ್ಘವಾಗಿ ತಮ್ಮ ದೇಹದ ಬಗ್ಗೆ ಬರೆದುಕೊಂಡಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಹುಬ್ಬೇರಿಸಿದೆ.

ಸದ್ಯ ಗೋವಾದಲ್ಲಿರುವ ಇಲಿಯಾನ ತಮ್ಮ ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಸಿನಿಮಾ ವಿಚಾರಕ್ಕೆ ಬಂದರೆ ತಮ್ಮ ಮುಂದಿನ ತೆಲುಗು ಸಿನಿ ಪ್ರಾಜೆಕ್ಟ್​ಗಳ ಬಗ್ಗೆ ಇಲಿಯಾನಾ ಘೋಷಣೆ ಮಾಡಬೇಕಿದೆ.

Comments are closed.