ಮುಂಬೈ

ಮೋದಿಯವರ ದಿಟ್ಟ ಆರ್ಥಿಕ ಸುಧಾರಣಾ ಕ್ರಮಗಳಿಂದ ಆರ್ಥಿಕ ಅಭಿವೃದ್ಧಿ: ಮುಕೇಶ್‌ ಅಂಬಾನಿ

Pinterest LinkedIn Tumblr


ಮುಂಬಯಿ: ಪ್ರಧಾನಿ ಮೋದಿಯವರ ದಿಟ್ಟ ಆರ್ಥಿಕ ಸುಧಾರಣಾ ಕ್ರಮಗಳಿಂದ ದೇಶದ ಆರ್ಥಿಕ ಬೆಳವಣಿಗೆಗೆ ಕಾರಣವಾಗಲಿದೆ ಎಂದು ರಿಲಯನ್ಸ್‌ ಇಂಡಸ್ಟ್ರೀಸ್‌ ಅಧ್ಯಕ್ಷ ಮುಕೇಶ್‌ ಅಂಬಾನಿ ಹೇಳಿದ್ದಾರೆ.

ಪಂಡಿತ್‌ ದೀನ್‌ದಯಾಳ್‌ ಪೆಟ್ರೋಲಿಯಂ ಯೂನಿವರ್ಸಿಟಿಯ 8ನೇ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿಯವರ ಆತ್ಮ ವಿಶ್ವಾಸ ದೇಶಕ್ಕೇ ಪ್ರೇರಣೆ ಕೊಟ್ಟಿದೆ ಎಂದರು.

“ಮೋದಿ ನಾಯಕತ್ವದಲ್ಲಿ ಭಾರತ ಮುಂಬರುವ ವರ್ಷಗಳಲ್ಲಿ ತ್ವರಿತವಾಗಿ ಆರ್ಥಿಕ ಚೇತರಿಕೆ ದಾಖಲಿಸುವ ವಿಶ್ವಾಸ ನನಗಿದೆ” ಎಂದು ಅಂಬಾನಿ ಹೇಳಿದರು.

ಗುಜರಾತ್‌ನಲ್ಲಿ ಮುಖ್ಯಮಂತ್ರಿಯಾಗಿದ್ದಾಗಲೇ ನರೇಂದ್ರ ಮೋದಿಯವರು, ಭಾರತವು ಇಂಧನ, ಇಂಧನ ಶಿಕ್ಷಣ, ಸಂಶೋಧನೆ, ಅಭಿವೃದ್ಧಿಯಲ್ಲಿ ಸ್ವಾವಲಂಬಿಯಾಗಬೇಕು ಎಂದು ದೂರದೃಷ್ಟಿ ಹೊಂದಿದ್ದರು.

ಇಂಧನ ವಲಯದಲ್ಲೂ ಭಾರಿ ಬದಲಾವಣೆ ಆಗುತ್ತಿದೆ. ಭಾರತ ಎರಡು ಉದ್ದೇಶ ಹೊಂದಬೇಕು. ಮೊದಲನೆಯದಾಗಿ ಆರ್ಥಿಕವಾಗಿ ಸೂಪರ್‌ ಪವರ್‌ ಆಗಬೇಕು. ಎರಡನೆಯದಾಗಿ ಹಸಿರು ಮತ್ತು ಸ್ವಚ್ಛ ಇಂಧನದಲ್ಲೂಅಗ್ರಗಣ್ಯವಾಗಿ ಹೊರಹೊಮ್ಮಬೇಕು ಎಂದು ಅಂಬಾನಿ ವಿವರಿಸಿದರು.

ಕೋವಿಡ್‌-19 ಬಿಕ್ಕಟ್ಟಿನ ವಿರುದ್ಧ ಭಾರತದ ಹೋರಾಟ ನಿರ್ಣಾಯಕ ಘಟ್ಟ ತಲುಪಿದ್ದು, ಸತತ ಪ್ರಯತ್ನವನ್ನು ಈ ಸಂಕ್ರಮಣ ಕಾಲದಲ್ಲಿ ಬಿಡಬಾರದು ಎಂದರು.

Comments are closed.