ಮನೋರಂಜನೆ

ಶೀತಲ್‌ ಮತ್ತು ಕೃತಿ ಅವರನ್ನು ನೃತ್ಯರಂಗಕ್ಕೆ ಸ್ವಾಗತಿಸಿ

Pinterest LinkedIn Tumblr

sheetalನೃತ್ಯ ಅಂದರೆ ಅದೊಂದು ಅರ್ಚನೆ, ಕಲೋಪಾಸನೆ, ನೃತ್ಯದ ಮೂಲಕ ಹೊಸ ದೈವಿಕತೆಯ ಹುಡುಕಾಟ. ಅಂಥ ನೃತ್ಯ ಕ್ಷೇತ್ರದಲ್ಲಿ ಭರತನಾಟ್ಯ ಒಂದು ವಿಶಿಷ್ಟ ಪ್ರಕಾರ. ಇಬ್ಬರು ಹೊಸ ತಲೆಮಾರಿನ ಕುಡಿಗಳು ತಮ್ಮ ಭರತನಾಟ್ಯ ರಂಗಪ್ರವೇಶಕ್ಕೆ ಈ ವಾರ ಸಜ್ಜಾಗಿದ್ದಾರೆ. ಒಬ್ಬರು ಶೀತಲ್‌ ಉಂಬ್ರೆ ಆರ್‌. ಇನ್ನೊಬ್ಬರು ಕೃತಿ ಎಂ. ತಂಬಂಡ.

ಪ್ರತಿಭಾನ್ವಿತೆಯ ಅರಂಗೇಟ್ರಂ ನೀವು ಚಂದನ ಟಿವಿಯಲ್ಲಿ ಬರುವ “ಮಧುರ ಮಧುರವೀ ಮಂಜುಳ ಗಾನ’ ಕಾರ್ಯಕ್ರಮ ನೋಡಿದ್ದರೆ ಈಕೆಯನ್ನು ಗಮನಿಸಿರುತ್ತೀರಿ. ಕೃತಿ ಎಂ. ತಂಬಂಡ ಪ್ರತಿಭಾನ್ವಿತೆ.

“ಮಧುರ ಮಧುರವೀ ಮಂಜುಳ ಗಾನ’ದಲ್ಲಿ ಹಳೆಯ ಗೀತೆಗಳಿಗೆ ಹೆಜ್ಜೆ ಹಾಕಿದ ಈಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ “ಚಿಗುರು’ ಕಾರ್ಯಕ್ರಮದಲ್ಲಿ ಗಮನ ಸೆಳೆದವರು. “ಪುಷ್ಪಾಂಜಲಿ ನೃತ್ಯ ಶಾಲೆ’ಯ ಹಲವು ಕಾರ್ಯಕ್ರಮಗಳಲ್ಲೂ ಗಮನ ಸೆಳೆದಿದ್ದಾರೆ. ಶಂಕರಟಿವಿಯ ಭರತನಾಟ್ಯಂ ರಿಯಾಲಿಟಿ ಶೋನಲ್ಲಿ ಪಾಲ್ಗೊಂಡಿರುವ ಈಕೆ 10ನೇ ತರಗತಿ ವಿದ್ಯಾರ್ಥಿನಿ. ಬೃಂದಾ ದೀಪಕ್‌ ಅವರಲ್ಲಿ ಭರತನಾಟ್ಯವನ್ನು ಅಭ್ಯಾಸ ಮಾಡುತ್ತಿದ್ದಾರೆ. ಈ ಸಲದ ರಂಗಪ್ರವೇಶ ಆಕೆಯ ನೃತ್ಯ ಪ್ರತಿಭೆಯನ್ನು ಒರೆಗೆ ಹಚ್ಚಲಿದೆ. ನಟುವಾಂಗದಲ್ಲಿ ಬೃಂದಾ, ಹಾಡುಗಾರಿಕೆಯಲ್ಲಿ ಡಿಎಸ್‌ ಶ್ರೀವತ್ಸ, ಮೃದಂಗದಲ್ಲಿ ವಿದ್ವಾನ್‌ ಎನ್‌. ನಾರಾಯಣಸ್ವಾಮಿ, ಕೊಳಲಿನಲ್ಲಿ ವಿದ್ವಾನ್‌ ಕಾರ್ತಿಕ್‌ ಸತ್ವಳ್ಳಿ, ವೀಣೆಯಲ್ಲಿ ವಿ. ಎ. ಶಂಕರರಾಮನ್‌ ಮತ್ತು ವಯೋಲಿನ್‌ ನಲ್ಲಿ ಸಿ. ಮಧುಸೂದನ್‌ ಸಹಕಾರ ನೀಡಲಿದ್ದಾರೆ.

ಕನಡ ಕೃತಿ ಜೊತೆ ಶೀತಲ್‌
ರಮೇಶ್‌ ರಾವ್‌, ಅನಿತಾ ಪುತ್ರಿಯಾಗಿರುವ ಶೀತಲ್‌, ತಮ್ಮ 8ನೇ ವಯಸ್ಸಿಗೇ ಸುಭದ್ರಾ ಪ್ರಭು ಅವರ ಬಳಿ ಭರತನಾಟ್ಯ ನೃತ್ಯಾಭ್ಯಾಸ ಪ್ರಾರಂಭಿಸಿದರು. ಶಕುಂತಲಾ ಆರ್‌. ಪ್ರಭಾತ್‌ ಬಳಿ ಅಭ್ಯಾಸ ಮುಂದುವರೆಸಿದರು.

ಭರತನಾಟ್ಯದಲ್ಲಿ ಜ್ಯೂನಿಯರ್‌ ಮಾಡಿರುವ ಶೀತಲ್‌, ರಾಜ್ಯದಲ್ಲೂ, ರಾಜ್ಯದ ಹೊರಭಾಗಗಳಲ್ಲೂ ಹಲವು ಪ್ರತಿಷ್ಠಿತ ವೇದಿಕೆಗಳಲ್ಲಿ ನೃತ್ಯ ಪ್ರತಿಭೆ ಪ್ರದರ್ಶಿಸಿದ್ದಾರೆ. ಶೀತಲ್‌ ರಂಗ ಪ್ರವೇಶದಲ್ಲಿ ಕನ್ನಡ ಕೃತಿಗಳಿಗೆ ಹೆಚ್ಚಿನ ಆದ್ಯತೆ ನೀಡಲಿದ್ದಾರೆ.ಆಚಾರ್ಯ ರಾಘವೇಂದ್ರ ಜೆ ಪ್ರಭಾತ್‌ ಮತ್ತು ತಿರುಮಲೈ ಶ್ರೀನಿವಾಸ್‌ ಅವರ ರಚನೆಯ ವರ್ಣವನ್ನು ಪ್ರಸ್ತುತಪಡಿಸಲಿದ್ದಾರೆ. ನಂತರ ಕನಕದಾಸರ ರಚನೆಯ ದೇವರ ನಾಮವನ್ನೂ ಶೀತಲ್‌ ಪ್ರಸ್ತುತಪಡಿ ಸಲಿದ್ದಾರೆ. ಭೀಮೇಶ ವಿಠಲರ ಪೂರ್ವಿ ಕಲ್ಯಾಣಿ ರಾಗದ ಜಾವಳಿಯೂ ಈ ರಂಗಪ್ರವೇಶ ಕಾರ್ಯಕ್ರಮದ ವಿಶೇಷ.
-ಉದಯವಾಣಿ

Comments are closed.