ಮುಂಬೈ: ಸಲ್ಮಾನ್ ಖಾನ್ ಗರ್ಲ್ಫ್ರೆಂಡ್ ಲೂಲಿಯಾ ಸಲ್ಮಾನ್ ಖಾನ್ ನಿವಾಸದ ಬಳಿ ಮನೆ ಖರೀದಿ ಮಾಡಲಿದ್ದಾರಂತೆ. ಕೆಲ ಮೂಲಗಳ ಪ್ರಕಾರ ರೋಮ್ಯಾನಿಯಾದ ಟಿವಿ ನಿರೂಪಕಿ ಲೂಲಿಯಾ ಅಪಾರ್ಟ್ಮೆಂಟ್ ಖರೀದಿ ಮಾಡುವ ಪ್ಲ್ಯಾನ್ ನಲ್ಲಿದ್ದಾರೆ ಎಂದು ಹೇಳಲಾಗ್ತಿದೆ.
ಸಲ್ಮಾನ್ ಬಾಂದ್ರಾದ ಗೆಲ್ಯಾಕ್ಸಿ ಅಪಾರ್ಟ್ಮೆಂಟ್ನಲ್ಲಿದ್ದಾರೆ. ಈ ಮನೆಯ ಪಕ್ಕದಲ್ಲ ಲೂಲಿಯಾ ಅಪಾರ್ಟ್ಮೆಂಟ್ ಖರೀದಿ ಮಾಡುತ್ತಾರೆ ಎನ್ನಲಾಗುತ್ತಿದೆ.
ಇತ್ತೀಚೆಗೆ ಸಲ್ಮಾನ್ ಹಾಗೂ ಲೂಲಿಯಾ ಏರಪೋರ್ಟ್ನಲ್ಲಿ ಕಾಣಿಸಿಕೊಂಡಿದ್ದರು. ಇತ್ತ ವಿರಾಟ್ ಕೊಹ್ಲಿ ಹಾಗೂ ಅನುಶ್ಕಾ ಶರ್ಮಾ ಕೂಡ ಏರ್ಪೋರ್ಟ್ನಲ್ಲಿ ಕಾಣಿಸಿಕೊಳ್ಳುವುದರ ಬಗ್ಗೆ ಸುದ್ದಿಯಾಗಿದ್ದರು. ಸದ್ಯ ಇವೆರೆಡು ಜೋಡಿಗಳು ಹೋದ ಕಡೆಗಳಲ್ಲಿ ಕ್ಯಾಮರಾ ಕಣ್ಣಿಗೆ ಬೀಳುತ್ತಿವೆ.
ಮೊನ್ನೆ ನಡೆದಿದ್ದ ಪ್ರೀತಿ ಜಿಂಟಾ ರಿಶಪ್ಶನ್ ವೇಳೆ ಸಲ್ಮಾನ್ ತನ್ನ ಗೆಳತಿ ಲೂಲಿಯಾ ಜತೆಗೆ ಪಾರ್ಟಿಗೆ ಬಂದಿದ್ದರು. ಲೂಲಿಯಾ ‘ಸುಲ್ತಾನ್’ ಚಿತ್ರದ ಸೆಟ್ಗೆ ಭೇಟಿ ನೀಡಿದ್ದರು.
ಮೂಲಗಳ ಪ್ರಕಾರ ಸಲ್ಮಾನ್ ಇದೇ ವರ್ಷಕ್ಕೆ ಮದುವೆಯಾಗುವ ಬಗ್ಗೆ ಪ್ಯ್ಲಾನ್ನಲ್ಲಿದ್ದಾರೆ. ಅದಕ್ಕಾಗಿ ಅವರು ಡಿಸೆಂಬರ್ 27ಕ್ಕೆ ಮದುವೆಯಾಗುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಆದರೆ ಸಲ್ಮಾನ್ ಪ್ರೋಫೆಶನಲ್ ಜೀವನ ನೋಡಿದ್ರೆ ಸಲ್ಮಾನ್ ಹಿಟ್ ಮೇಲೆ ಹಿಟ್ ಚಿತ್ರಗಳನ್ನು ನೀಡುತ್ತಿದ್ದಾರೆ… ಇನ್ನೂ ಸಲ್ಮಾನ್ ಮುಂಬರುವ ಚಿತ್ರ ‘ಸುಲ್ತಾನ್’ ತೆರೆಗೆ ಬರಲು ಸಜ್ಜಾಗಿದೆ.
Comments are closed.