ಮುಂಬಯಿ : ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಅವರು ತನ್ನ ಟ್ವಿಟರ್ ಹಿಂಬಾಲಕರ ಸಂಖ್ಯೆ 2 ಕೋಟಿ ದಾಟಿರುವ ಸಂಭ್ರಮದಲ್ಲಿ ಅಭಿಮಾನಿಗಳಿಗೆ ಬಿಗ್ ಥ್ಯಾಂಕ್ಸ್ ಎಂದಿರುವರಲ್ಲದೆ ಅವರಿಗೆ ಕೃತಜ್ಞತೆ ಹೇಳಲು ಅತ್ಯಂತ ಸಿಹಿಯಾದ ವಿಡಿಯೋ ಚಿತ್ರಿಕೆಯೊಂದನ್ನು ರೂಪಿಸಿದ್ದಾರೆ.
ತನ್ನ ಅಭಿಮಾನಿಗಳ ಸಂದೇಶಗಳಿಂದಾಗಿಯೇ ತಾನೋರ್ವ ಉತ್ತಮ ವ್ಯಕ್ತಿಯಾಗಲು ಸಾಧ್ಯವಾಗಿದೆ ಎಂದು 50ರ ಹರೆಯದ ನಟ ಶಾರುಖ್ ಖಾನ್ ಹೇಳಿದ್ದಾರೆ.
“ನಾನು ಶಾರುಖ್ ಖಾನ್ – ನನ್ನ 2 ಕೋಟಿ ಟ್ವಿಟರ್ ಹಿಂಬಾಲಕ ಅಭಿಮಾನಿಗಳಿಗೆ ಕೇವಲ ಧನ್ಯವಾದ ಹೇಳುವುದಷ್ಟೇ ಈ ಸಂದೇಶದ ಉದ್ದೇಶವಲ್ಲ ; ನಿಮ್ಮ ಸಂದೇಶಗಳು ನನಗೆ ದಿನ ನಿತ್ಯದ ಸಂಕಷ್ಟಗಳಲ್ಲಿ, ಸಿಟ್ಟು, ಅಸಹನೆ, ಆಕ್ರೋಶ, ಒತ್ತಡದ ಸಂದರ್ಭಗಳನ್ನು ಸಮರ್ಥವಾಗಿ ನಿಭಾಯಿಸುವುದಕ್ಕೆ ನೆರವಾಗಿವೆ; ನಿಮ್ಮ ಅಭಿಮಾನದಿಂದಾಗಿ ನಾನಿಂದು ಒಬ್ಬ ಉತ್ತಮ ವ್ಯಕ್ತಿಯಾಗಿದ್ದೇನೆ’ ಎಂದು ಶಾರುಖ್ ಖಾನ್ ತನ್ನ ವಿಡಿಯೋ ಸಂದೇಶದಲ್ಲಿ ಹೇಳಿದ್ದಾರೆ.
-ಉದಯವಾಣಿ
Comments are closed.