ಮನೋರಂಜನೆ

ಕನಸಿನ ಮನೆಗೆ ಶೀಘ್ರದಲ್ಲೇ ತೆರಳಲಿರುವ ಸೈಫ್ ಅಲಿ ಖಾನ್- ಕರೀನಾ

Pinterest LinkedIn Tumblr

saifಮುಂಬೈ: ಬಾಲಿವುಡ್‌ನ ಮೋಸ್ಟ್ ಬ್ಯೂಟಿಫುಲ್ ಕಪಲ್‌ಗಳಾದ ಸೈಫ್ ಅಲಿ ಖಾನ್ ಹಾಗೂ ಕರೀನಾ ಕಪೂರ್ ಶೀಘ್ರದಲ್ಲೇ ತಮ್ಮ ಕನಸಿನ ಮನೆಗೆ ತೆರಳಿಲಿದ್ದಾರೆ, ಡಿಸೆಂಬರ್‌ನಲ್ಲಿ ಕರೀನಾ ಮಗುವಿಗೆ ಜನ್ಮ ನೀಡಲಿದ್ದಾಳೆ. ಮಗುವಿನ ಆಗಮನಕ್ಕಾಗಿ ಕಾಯುತ್ತಿರುವ ದಂಪತಿಗಳು ಮಗುವಿಗಾಗಿ ಡ್ರಿಮ್ ಹೌಸ್‌ಗೆ ತೆರಳಲಿದ್ದಾರೆ ಎಂದು ಹೇಳಲಾಗುತ್ತಿದೆ.

ಬಾಂದ್ರಾ ಹೌಸ್‌ನ್ನು ಬಿಟ್ಟು ಸೈಫ್ ಹಾಗೂ ಕರೀನಾ ಮುಂದಿನ ತಿಂಗಳು ಮತ್ತೊಂದು ದೊಡ್ಡ ಮನೆಗೆ ತೆರಳಲಿದ್ದಾರೆ.2013ರಲ್ಲಿ 48 ಕೋಟಿ ನೀಡಿ ಆಸ್ತಿ ಕೊಂಡುಕೊಂಡಿದ್ದ ಸೈಫ್ ಹಾಗೂ ಕರೀನಾ ಆ ಜಾಗದಲ್ಲಿ ತಮ್ಮ ಹೊಸ ಮನೆ ನಿರ್ಮಾಣ ಮಾಡುತ್ತಿದ್ದಾರೆ.

ಮನೆ ನಿರ್ಮಾಣ ಹಂತ ಪ್ರಾಥಮಿಕದಲ್ಲಿದ್ದು, ಅನಂತರ ಕನಸಿನ ಮನೆ ನಿರ್ಮಾಣವಾಗಲಿದೆಯಂತೆ..

ಮೂರು ವರ್ಷಗಳ ಬಳಿಕ ನಾಲ್ಕು ಮಹಡಿಯ ಮನೆಯನ್ನು ಕೊಂಡುಕೊಂಡಿದ್ದ ಸೈಫ್ -ಕರೀನಾ. 3ಬಿಎಚ್‌ಕೆ ಅಪಾರ್ಟ್‌ಮೆಂಟ್ 3,000 ಫೀಟ್ ಒಳಗೊಂಡಿತ್ತು. ಇದೀಗ ಅದೇ ಜಾಗದಲ್ಲಿ ಸೆಲೆಬ್ರಿಟಿ ಡಿಸೈನರ್ ನೋಸರ್ ವಾಡಿಯಾ ಡಿಸೈನ್ ಮಾಡುತ್ತಿದ್ದು, ಅಮಿತಾಬ್ ಬಚ್ಚನ್, ಗೌತಮ್ ಸಿಂಗ್ಹಾನಿಯಾ ಹಾಗೂ ಅರ್ಜುನ್ ರಾಮ್‌ಪಾಲ್ ನಿವಾಸದ ಮಾದರಿಯಲ್ಲೇ ಸೈಫ್ ನಿವಾಸ ವಿನ್ಯಾಸ ಮಾಡಲಾಗುತ್ತಿದೆ.

Comments are closed.