ಸುವರ್ಣ ವಾಹಿನಿಯಲ್ಲಿ ಮೂಡಿಬರುತ್ತಿರುವ ಡ್ಯಾನ್ಸ್ ಡ್ಯಾನ್ಸ್ ರಿಯಾಲಿಟಿ ಷೋ ಇದೀಗ ಅಂತಿಮ ಹಂತ ತಲುಪಿದೆ. ಕಿರುತೆರೆಯ ಇತಿಹಾಸದಲ್ಲೇ ಹಲವು ದಾಖಲೆ ನಿರ್ಮಿಸಿರುವ ಈ ಡ್ಯಾನ್ಸ್ ಡ್ಯಾನ್ಸ್ ಷೋ, ಗ್ರ್ಯಾಂಡ್ ಫಿನಾಲೆಯತ್ತ ಸಾಗಿದೆ. ಇಂಥದ್ದೊಂದು ಡ್ಯಾನ್ಸ್ ಷೋ ಕಾರ್ಯಕ್ರಮಕ್ಕೆ ಹೊರಾಂಗಣದಲ್ಲಿ ಸೆಟ್ ಹಾಕಿ ದೇಶ, ವಿದೇಶಗಳಲ್ಲಿ
ಕನ್ನಡದ ಹಿರಿಮೆಯನ್ನು ಇನ್ನಷ್ಟು ಎತ್ತರಕ್ಕೆ ಏರಿಸಿದ ಕೀರ್ತಿಗೆ ಸುವರ್ಣ ವಾಹಿನಿ ಸಾಕ್ಷಿಯಾಗಿದೆ. ಸುಮಾರು ಒಂದು ದಶಕದ ಬಳಿಕ ಇದೇ ಮೊದಲ ಸಲ ನಟ ದರ್ಶನ್ ಅವರು
ನಟಿಯರಾದ ರಮ್ಯಾ ಹಾಗೂ ನಿಖಿತಾ ಅವರೊಂದಿಗೆ ವೇದಿಕೆ ಮೇಲೆ ಹೆಜ್ಜೆ ಹಾಕಿ ರಂಜಿಸಿದ್ದಾರೆ.
“ಡ್ಯಾನ್ಸ್ ಡ್ಯಾನ್ಸ್’ನ ಬೃಹತ್ ವೇದಿಕೆಯಲ್ಲಿ ಆ್ಯಕ್ಷನ್ ಸ್ಟಾರ್ಗಳ ಸ್ಟೆಪ್ಪು, “ಹಳ್ಳಿ ಹೈದ ಪ್ಯಾಟೇಗ್ ಬಂದ’ ಸ್ಪರ್ಧಿಗಳ ಸಖತ್ ಕುಣಿತ ಮತ್ತು ಷೋನಲ್ಲಿ ಎಲಿಮಿನೆಟೇಡ್ ಆದವರ ಮನರಂಜನಿಸುವ ನೃತ್ಯ ಹಾಗು ತೀರ್ಪುಗಾರರ
ಸ್ಪೆಷಲ್ ಎಂಟ್ರಿ ಸೇರಿದಂತೆ “ಪ್ಯಾಟೇ ಹುಡ್ಗಿàರ್ ಹಳ್ಳಿ ಲೈಫ್’ ತಂಡದ ಮೆಲೋಡೀಯಸ್ ಡ್ಯಾನ್ಸ್ಗಳು ಗ್ರ್ಯಾಂಡ್ ಫಿನಾಲೆಯನ್ನು ಮತ್ತಷ್ಟು ಕಲರ್ಫುಲ್ ಆಗಿ ಕಾಣಲು ಕಾರಣವಾಗಿವೆ.
ಸುಮಾರು 120 ದಿನಗಳ ಕಾಲ ಹೆಜ್ಜೆ ಹಾಕಿದ ಐದು ಜೋಡಿ ಸ್ಪರ್ಧಿಗಳು ವಿಜಯದ ಕಿರೀಟವನ್ನು ಮುಡಿಗೇರಿಸಿಕೊಳ್ಳಲು ಕಾದಿವೆ. ಈ ಐವರು ಜೋಡಿಗಳಲ್ಲಿ ಯಾರಿಗೆ ಆ ಗೆಲುವಿನ ಕಿರೀಟ ಸೇರಲಿದೆ ಮತ್ತು ಅದರ 10 ಲಕ್ಷ ರೂ. ಬಹುಮಾನ ಯಾರಿಗೆ ಸೇರುತ್ತೆ ಎಂಬ ಕುತೂಹಲ ಎಲ್ಲರಿಗೂ ಇದೆ. ಆ ಕುತೂಹಲಕ್ಕೆ ಜು.20 ರಿಂದ ಪ್ರಸಾರವಾಗುವ ಡ್ಯಾನ್ಸ್ ಡ್ಯಾನ್ಸ್ ಷೋ ವೀಕ್ಷಿಸಬೇಕು.
-ಉದಯವಾಣಿ
Comments are closed.