ಲಂಡನ್: ಕಾಲ್ವಿನ್ ಬೇ(ಯುಕೆ): ಗ್ಲಾಮೋರ್ಗನ್ ಹದಿಹರೆಯದ ಬಾಲಕ ಅನೆರಿನ್ ಡೊನಾಲ್ಡ್ ಡರ್ಬಿಶೈರ್ ವಿರುದ್ಧ ಭಾನುವಾರ ಅಚ್ಚರಿಯ ಇನ್ನಿಂಗ್ಸ್ ಆಡುವ ಮೂಲಕ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅತಿ ವೇಗದ ದ್ವಿಶತಕದ ದಾಖಲೆಯನ್ನು ಸಮಗೊಳಿಸಿದ್ದಾರೆ. ಡೊನಾಲ್ಡ್ ಸ್ಕೋರ್‌ನಲ್ಲಿ 15 ಸಿಕ್ಸರ್‌ಗಳಿದ್ದು, 123 ಎಸೆತಗಳಲ್ಲಿ 200 ರನ್ ಸ್ಕೋರ್ ಮಾಡುವ ಮೂಲಕ 1985ರಲ್ಲಿ ಭಾರತದ ಮಾಜಿ ಬ್ಯಾಟ್ಸ್‌ಮನ್ ರವಿಶಾಸ್ತ್ರಿ ಸ್ವದೇಶದಲ್ಲಿ ಸಾಧಿಸಿದ ದಾಖಲೆಗೆ ಸರಿಸಮವಾಗಿ ಡೊನಾಲ್ಡ್ ಸ್ಕೋರ್ ಮಾಡಿದ್ದಾರೆ.
19 ವರ್ಷದ ಬಾಲಕ ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ತನ್ನ ತಂಡ 96ಕ್ಕೆ 3 ವಿಕೆಟ್ ಕಳೆದುಕೊಂಡಿದ್ದಾಗ ಕ್ರೀಸ್‌ಗೆ ಆಡಲಿಳಿದ ತಕ್ಷಣವೇ ಬ್ಯಾಟಿಂಗ್ ದಾಳಿ ಆರಂಭಿಸಿ ಚೊಚ್ಚಲ ಶತಕವನ್ನು ಸಿಕ್ಸರ್ ಸಿಡಿಸುವ ಮೂಲಕ ಮುಟ್ಟಿದರು. 100ರ ಗಡಿಯಿಂದ 200ರ ಗಡಿಯನ್ನು ಮುಟ್ಟಲು ಅವರು ಕೇವಲ 43 ಎಸೆತಗಳನ್ನು ಮಾತ್ರ ತೆಗೆದುಕೊಂಡರು.
ರವಿ ಶಾಸ್ತ್ರಿ ಅವರ ಹಿಂದಿನ ದಾಖಲೆಯನ್ನು ಸಮಗೊಳಿಸಿದ್ದಕ್ಕಾಗಿ ಸಂತಸವಾಗಿದೆ ಎಂದು ಡೊನಾಲ್ಡ್ ಹೇಳಿದರು. ಡೊನಾಲ್ಡ್ ತಮ್ಮ 150 ಮತ್ತು 200 ರನ್ ಗಡಿಯನ್ನು ಸಿಕ್ಸರುಗಳ ಮೂಲಕ ದಾಟಿ 136 ಎಸೆಗಳಲ್ಲಿ 234 ರನ್ ಸಿಡಿಸಿದರು. ಗ್ಲಾಮೋರ್ಗನ್ ಮೊದಲ ದಿನ 8ವಿಕೆಟ್ ಕಳೆದುಕೊಂಡು 491 ರನ್ ಗಳಿಸಿದೆ.
Comments are closed.