ಮುಂಬೈ: ಶಾರೂಖ್ ಖಾನ್ ತಮ್ಮ ರಾಯಿಸ್ ಚಿತ್ರದ ಬಗ್ಗೆ ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ರಾಯಿಸ್ ಚಿತ್ರದಲ್ಲಿ ಶಾರೂಖ್ ಖಾನ್ ಅಭಿನಯಿಸುತ್ತಿರುವುದು ನಿಮಗೆಲ್ಲರಿಗೂ ಗೊತ್ತು.. ಇನ್ನೂ ಹೃತಿಕ್ ರೋಷನ್ ಅಭಿನಯದ ‘ಕಾಬಿಲ್’ ಚಿತ್ರವು ಕೂಡ ತೆರೆ ಮೇಲೆ ಬರುತ್ತಲಿದೆ. ಈ ಹಿನ್ನೆಲೆಯಲ್ಲಿ ಕಿಂಗ್ ಖಾನ್ ಶಾರೂಖ್ ಹೃತಿಕ್ ಮನೆಗೆ ತೆರಳಿ ಅಲ್ಲಿ ರಾಕೇಶ್ ರೋಷನ್ ಹಾಗೂ ಹೃತಿಕ್ ರೋಷನ್ ಜತೆಗೆ ಕೆಲ ಹೊತ್ತು ಮಾತುಕತೆ ನಡೆಸಿದ್ದಾರೆ.
‘ರಾಯಿಸ್ ‘ಹಾಗೂ ‘ಕಾಬಿಲ್’ ಚಿತ್ರಗಳು ಒಂದೇ ದಿನ ಕ್ಲ್ಯಾಷ್ ಆಗುತ್ತವೆ ಎಂಬ ಕಾರಣಕ್ಕಾಗಿ ಶಾರೂಖ್ ಭೇಟಿ ಮಾಡಿದ್ದಾರೆ ಎನ್ನಲಾಗುತ್ತಿದೆ. ಆದ್ದರಿಂದ ‘ಕಾಬಿಲ್ ‘ಚಿತ್ರದ ದಿನಾಂಕವನ್ನು ಮುಂದೂಡುವಂತೆ ಶಾರೂಖ್ ಕೊರಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಬಗ್ಗೆ ಖುದ್ದು ಶಾರೂಖ್ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ. ಬಹುದಿನದ ಬಳಿಕ ಗೆಳೆಯ,ಅತ್ಯುತ್ತಮ ಗುರು, ಹಾಗೂ ಕುಟುಂಬದ ಸದಸ್ಯನಂತಿರುವ ಮಿಸ್ಟರ್ ರಾಕೇಶ್ ರೋಷನ್‌ರನ್ನು ಭೇಟಿ ಮಾಡಿದೆ. ಇಲ್ಲಿ ತುಂಬಾ ಕೆಲಸ ಮಾಡುವುದು ಮುಖ್ಯವಾಗುವುದಿಲ್ಲ, ಸರಿಯಾದ ಆಯ್ಕೆ ಮಾತ್ರ ಮುಖ್ಯವಾಗುತ್ತದೆ ಎಂದು ಎಸ್‌ಆರ್‌ಕೆ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.
ಇನ್ನೂ ಕಬಿಲ್ ‘ಚಿತ್ರದಲ್ಲಿ ಹೃತಿಕ್ ಕುರುಡು ವ್ಡಕ್ತಿಯ ಪಾತ್ರದಲ್ಲಿ ಮಿಂಚಲಿದ್ದಾರೆ. ಚಿತ್ರದಲ್ಲಿ ನಟಿಸುತ್ತಿರೋ ಹೃತಿಕ್ ರೋಷನ್. ಕಬಿಲ್ ಚಿತ್ರದಲ್ಲಿ ಹೃತಿಕ್ ಅಂಧ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಅವರ ಅಭಿಮಾನಿಗಳಿಗಳು ಖುಷಿ ಆಗಿದ್ದಂತೂ ಸುಳ್ಳಲ್ಲ.
ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ ಅಯುಶ್ ಗೌರಿಕ್ಕರ್, ಅಲ್ಲದೇ ಈ ಚಿತ್ರದ ನಿರ್ಮಾಪಕ ಸಂಜಯ್ ಗುಪ್ತಾ. ಈ ಚಿತ್ರಕ್ಕಾಗಿ ಹೃತಿಕ್ ಸಾಕಷ್ಟು ತಯಾರಿ ನಡೆಸುತ್ತಿದ್ದಾರೆ. ಹೃತಿಕ್ ಜತೆಗೆ ಜೋಡಿಯಾಗಲಿದ್ದಾರೆ ಯಾಮಿ ಗೌತಮಿ.
Comments are closed.