ಮನೋರಂಜನೆ

ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಹೃದಯಬಿರಿಯುವ ಸೋಲು

Pinterest LinkedIn Tumblr

testನವದೆಹಲಿ: ಭಾರತ ಕ್ರಿಕೆಟ್ ತಂಡಕ್ಕೆ ವಿದೇಶದಲ್ಲಿ ಟೆಸ್ಟ್ ಸರಣಿ ಗೆಲುವುದು ಹಲವು ವರ್ಷಗಳಿಂದ ಕಠಿಣವಾಗಿ ಕಂಡಿದೆ. ಏಕದಿನ ಪಂದ್ಯಗಳಲ್ಲಿ ತಂಡವು ಉತ್ತಮ ಸಾಧನೆ ಮಾಡಿದ್ದು, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾಗಳಲ್ಲಿ ಐದು ದಿನಗಳ ಟೆಸ್ಟ್ ಪಂದ್ಯ ಗೆಲ್ಲುವುದು ಮಾತ್ರ ಸವಾಲಾಗಿ ಪರಿಣಮಿಸಿದೆ.

1990ರ ದಶಕದಲ್ಲಿ ವೆಸ್ಟ್ ಇಂಡೀಸ್ ತಂಡವು ಬಲಿಷ್ಠ ತಂಡವಾಗಿತ್ತು. 1997ರ ಟೆಸ್ಟ್ ಸರಣಿಯಲ್ಲಿ ಭಾರತ ವೆಸ್ಟ್ ಇಂಡೀಸ್ ವಿರುದ್ದ ಪ್ರಖ್ಯಾತ ಸರಣಿ ಜಯವನ್ನು ದಾಖಲಿಸುವ ಅಂಚಿನಲ್ಲಿತ್ತು. ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಕೇವಲ 120 ರನ್ ಚೇಸ್ ಮಾಡಿದ್ದರೆ ವಿಜಯಲಕ್ಷ್ಮಿ ಒಲಿಯುತ್ತಿದ್ದಳು.

ಆದರೆ ಬಲಿಷ್ಠ ಬ್ಯಾಟಿಂಗ್ ಲೈನ್‌ಅಪ್ ಇಸ್ಪೀಟೆಲೆಯಂತೆ 81ಕ್ಕೆ ಆಲೌಟಾಯಿತು. ಸಚಿನ್, ಸೌರವ್, ಅಜರುದ್ದೀನ್, ರಾಹುಲ್ ದ್ರಾವಿಡ್, ಲಕ್ಷ್ಮಣ್, ಸಿದ್ದು ಮುಂತಾದ ಸ್ಟಾರ್ ಬ್ಯಾಟ್ಸ್‌ಮನ್‌ಗಳಿಗೆ 120 ರನ್ ಚೇಸ್ ಮಾಡಲಾಗಲಿಲ್ಲ.

Comments are closed.