ಮನೋರಂಜನೆ

ಕರೀನಾ ಕಪೂರ್ ಪ್ರೆಗ್ನೆಂಟ್..ಕಾಫಿ ತ್ಯಜಿಸುವಂತೆ ಸಲಹೆ ನೀಡಿದ ಅಮಿರ್ ಖಾನ್

Pinterest LinkedIn Tumblr

ameerಮುಂಬೈ: ಕರೀನಾ ಕಪೂರ್ ತಾಯಿಯಾಗುತ್ತಿರುವುದು ಎಲ್ಲರಿಗೂ ಗೊತ್ತು. ಕರೀನಾ ಕಪೂರ್ ನಾಲ್ಕು ತಿಂಗಳ ಗರ್ಭಿಣಿ, ಮೊದಲ ಬಾರಿಗೆ ಅಮ್ಮನಾಗುತ್ತಿರುವುದಕ್ಕೆ ಸಂತೋಷದಿಂದ ಇರೋ ಬೆಬೋಗೆ, ಇದೀಗ ಮತ್ತೊಬ್ಬ ಸ್ಟಾರ್ ಸಲಹೆ ನೀಡಿದ್ದಾರೆ. ಬಾಲಿವುಡ್ ನಟ, 3 ಇಡಿಯೇಟ್ಸ್ ಕೋ-ಸ್ಟಾರ್ ಆಗಿದ್ದ ಅಮಿರ್ ಖಾನ್ ಕರೀನಾಳನ್ನು ಕಾಫಿ ತ್ಯಜಿಸುವಂತೆ ಸಲಹೆ ನೀಡಿದ್ದಾರೆ.

ಅಧುನ್ ಭಾಬನಿ ಅಖ್ತರ್ ಸಲೋನ್‌ನಲ್ಲಿ ಕೆಲ ದಿನಗಳ ಹಿಂದೆಯಷ್ಟೇ ಬೆಬೋ ಶೂಟಿಂಗ್‌ನಲ್ಲಿ ಬ್ಯೂಸಿ ಇದ್ದಾಳೆ. ಈ ವೇಳೆ ಸೆಟ್‌ಗೆ ಬೇಟಿ ನೀಡಿದ್ದ ಮಿಸ್ಟರ್ ಪರ್ಫೆಕ್ಷನಿಸ್ಟ್, ಕೆಲ ಹೊತ್ತು ಕರೀನಾ ಜತೆಗೆ ಮಾತುಕತೆ ನಡೆಸಿ ಕೆಲ ಟೀಪ್ಸ್‌ಗಳನ್ನು ನೀಡಿದ್ದಾರೆ,

ಕರೀನಾಗೆ ಹತ್ತಿರದಲ್ಲೇ ಇರೋ ಸ್ಟೂಡಿಯೋದಲ್ಲಿ ಅಮಿರ್ ಖಾನ್ ಶೂಟಿಂಗ್‌ನಲ್ಲಿ ಬ್ಯೂಸಿ ಇದ್ದಾರೆ. ಈ ವೇಳೆ ಕರೀನಾಗೆ ಹಲೋ ಹೇಳು ಅಮಿರ್ ಬಂದಿದ್ದರು. ಈ ವೇಳೆ ಕರೀನಾ ಜತೆಗೆ ಊಟ ಮಾಡಿದ ಅವರು, ಬೆಬೋಗೆ ಕೆಲ ಟಿಪ್ಸ್‌ಗಳನ್ನು ನೀಡಿದ್ದಾರೆ.

ಪ್ರೆಗ್ನೆನ್ಸಿ ಇರುವಾಗ ಕಾಫಿ ಕುಡಿಯುವುದು ಉತ್ತಮವಲ್ಲ ಎಂದು ಸಂಶೋಧನೆಯಿಂದ ಸಾಬೀತು ಪಡಿಸಿದೆ. ಗರ್ಭಾವಸ್ಥೆಯಲ್ಲಿ ಕಾಫಿ ಕುಡಿದ್ರೆ ಮಗುವಿನ ಮೇಲೆ ಪರಿಣಾಮ ಬೀರಲಿದೆ.

Comments are closed.