ಡ್ಯಾನಿ ಅಲಿಯಾಸ್ ಡ್ಯಾನಿ ಕುಟ್ಟಪ್ಪ ತಮಿಳಿಗೆ ಹೊರಟಿದ್ದಾರೆ. ಬೇರೆ ಭಾಷೆಯ ಚಿತ್ರಗಳಲ್ಲಿ ನಟಿಸುವುದು ಅವರಿಗೆ ಹೊಸದೇನಲ್ಲ. ಇದಕ್ಕೂ ಮುನ್ನ ಅವರು ಬೆಂಗಾಲಿ ಚಿತ್ರದಲ್ಲೊಂದು ಪಾತ್ರ ಮಾಡಿ ಬಂದಿದ್ದರು. ಆ ನಂತರ ರಾಜಮೌಳಿ ನಿರ್ದೇಶನದ “ಬಾಹುಬಲಿ -2′ ಚಿತ್ರದಲ್ಲಿ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುವುದಕ್ಕೆ ಹೈದರಾಬಾದಿಗೂ ಹೋಗಿ ಬಂದಿದ್ದರು. ಆ ಚಿತ್ರ ಇನ್ನೂ ಬಿಡುಗಡೆಯಾಗಿಲ್ಲ, ಆಗಲೇ ಡ್ಯಾನಿ, ತಮಿಳಿನ ಚಿತ್ರವೊಂದರಲ್ಲಿ ಪ್ರಮುಖ ಪಾತ್ರ ನಿರ್ವಹಿಸುವುದಕ್ಕೆ ಸದ್ಯದಲ್ಲೇ ಚೆನ್ನೈನ ಬಸ್ ಹತ್ತಲಿದ್ದಾರೆ.
ಆ ಚಿತ್ರ ಯಾವುದು ಗೊತ್ತಾ? “ಶಿವಲಿಂಗ’ ಚಿತ್ರದ ತಮಿಳು ರೀಮೇಕ್. ಕನ್ನಡದಲ್ಲಿ “ಶಿವಲಿಂಗ’ ಯಶಸ್ವಿಯಾಗಿ ಪ್ರದರ್ಶನಗೊಂಡಿದ್ದು, ನೂರು ದಿನಗಳನ್ನು ಪೂರೈಸಿದ್ದು, ಅದರ ಮುಂದುವರೆದ ಭಾಗ ಬರುವ ಸುದ್ದಿಯಾಗಿದ್ದು ಎಲ್ಲವೂ ಗೊತ್ತೇ ಇದೆ. ಈಗ ಆ ಚಿತ್ರವನ್ನು ಪಿ. ವಾಸು ತಮಿಳಿಗೆ ತೆಗೆದುಕೊಂಡು ಹೊರಟಿದ್ದಾರೆ. ನಟ-ನಿರ್ದೇಶಕ ಲಾರೆನ್ಸ್ ಅಭಿನಯದಲ್ಲಿ ರೀಮೇಕ್ ಮಾಡುವುದಕ್ಕೆ ಸಿದ್ಧತೆ ನಡೆಸಿದ್ದಾರೆ. ಶಿವರಾಜಕುಮಾರ್ ಮಾಡಿದ ಪಾತ್ರವನ್ನು ಲಾರೆನ್ಸ್ ಮಾಡಿದರೆ, ಕನ್ನಡದಲ್ಲಿ ಡ್ಯಾನಿ ಮಾಡಿದ ಕೊಲೆಗಾರನ ಪಾತ್ರವನ್ನು ಅವರೇ ತಮಿಳಿನಲ್ಲೂ ಮಾಡುತ್ತಿರುವುದು ವಿಶೇಷ. ಆ ಪಾತ್ರವನ್ನು ಡ್ಯಾನಿ ಮಡಿದರೆ ಸರಿ ಎಂಬ ಕಾರಣಕ್ಕೆ ವಾಸು ಅವರು, ಡ್ಯಾನಿಯನ್ನು ತಮಿಳಿಗೆ ಕರೆದುಕೊಂಡು ಹೊರಟಿದ್ದಾರೆ. ಇನ್ನೂ ಹೆಸರಿಡದ ಈ ಚಿತ್ರ ಸೆಪ್ಟೆಂಬರ್‌ನಲ್ಲಿ ಪ್ರಾರಂಭವಾಗಲಿದೆ.
“ನೀವು ಬೇರೆ ಭಾಷೆಯಲ್ಲಿ ಯಾಕೆ ಟ್ರೆ„ ಮಾಡಬಾರ್ಧು ಅಂತ ಸಲಹೆ ಕೊಡ್ತಾರೆ. ನನಗೆ ಬೇರೆ ಭಾಷೆಗೆ
ಹೋಗಬಾರ್ಧು ಅಂತೇನಿಲ್ಲ. ಇಲ್ಲಿ ಮೊದಲು ಗುರುತಿಸಿಕೊಳ್ಳಬೇಕು ಅಂತ ಆಸೆ. ಅಲ್ಲಿಗೂ ಹೋಗ್ತಿàನಿ. ಬಟ್ ನನ್ನ ಮೊದಲ ಆದ್ಯತೆ ಕನ್ನಡಕ್ಕೆ ಇರುತ್ತೆ. ಏಕೆಂದರೆ, ಇಲ್ಲಿಯ ಬಗ್ಗೆ ನನಗೆ ಗೊತ್ತಿದೆ. ಭಾಷೆ ಮೇಲೆ ಹಿಡಿತ ಇದೆ …’ ಎನ್ನುತ್ತಾರೆ ಡ್ಯಾನಿ.
-ಉದಯವಾಣಿ
Comments are closed.