ಅನೂಪ್ ಭಂಡಾರಿ ಮತ್ತು ನಿರೂಪ್ ಭಂಡಾರಿ ಸಹೋದರರು, “ರಂಗಿತರಂಗ’ದ ನಂತರ “ರಾಜರಥ’ ಎಂಬ ಸಿನಿಮಾ ಮಾಡುವುದಕ್ಕೆ ಹೊರಟಿರುವುದು ಎಲ್ಲರಿಗೂ ಗೊತ್ತೇ ಇದೆ. ಈಗಾಗಲೇ ಚಿತ್ರದ ಮೊದಲ ಹಂತದ ಚಿತ್ರೀಕರಣ ಸಹ ಮುಗಿದಿದೆ. ಹೀಗಿರುವಾಗಲೇ ಚಿತ್ರದ ಮೊದಲ ಟೀಸರ್ ಬಿಡುಗಡೆ ಮಾಡುವುದಕ್ಕೆ ಸಜ್ಜಾಗಿದ್ದಾರೆ ಅನೂಪ್ ಭಂಡಾರಿ. ಯಾವಾಗ ಗೊತ್ತಾ? ತಮ್ಮ ಸಹೋದರ ನಿರೂಪ್ ಭಂಡಾರಿ ಅವರ ಹುಟ್ಟುಹಬ್ಬವಾದ ಆಗಸ್ಟ್ 13ರಂದು. ಅಂದು ನಿರೂಪ್ ಭಂಡಾರಿಯ ಹುಟ್ಟುಹಬ್ಬದ ಗಿಫ್ಟ್ ಆಗಿ, ಚಿತ್ರದ ಮೊದಲ ಟೀಸರ್ ಗಿಫ್ಟ್ ಆಗಿ ಬಿಡುಗಡೆ ಮಾಡುವುದಕ್ಕೆ ಹೊರಟಿದ್ದಾರೆ ಅನೂಪ್ ಭಂಡಾರಿ.
ಈ ಚಿತ್ರವನ್ನು ಜಾಲಿ ಹಿಟ್ಸ್ ಬ್ಯಾನರ್‌ನಲ್ಲಿ ಆಜಯ್ ರೆಡ್ಡಿ, ಅಂಜು ವಲ್ಲಭ್,ವಿಶು ಡಾಕಪ್ಪಗಾರಿ, ಸತೀಶ್ ಶಾಸ್ತ್ರಿ ನಿರ್ಮಾಣ ಮಾಡುತ್ತಿದ್ದಾರೆ. ಇದೊಂದು ರೊಮ್ಯಾಂಟಿಕ್ ಕಾಮಿಡಿ ಸಿನಿಮಾ ಆಗಿದ್ದು, ಇಲ್ಲಿ ಬೇರೆ ತರಹದ ವಿಷಯ ಇಟ್ಟುಕೊಂಡು ಸಿನಿಮಾ ಮಾಡೋಕೆ ಹೊರಟಿದ್ದಾರೆ ನಿರ್ದೇಶಕ ಅನೂಪ್ ಭಂಡಾರಿ. ನಿರ್ದೇಶನದ ಜತೆಯಲ್ಲಿ ಅನೂಪ್ ಭಂಡಾರಿ ಅವರೇ ಇಲ್ಲೂ ಸಹ ಸಂಗೀತ ಹಾಗು ಸಾಹಿತ್ಯದ ಜವಾಬ್ದಾರಿ ಹೊತ್ತಿದ್ದಾರೆ. ಇನ್ನು, “ರಂಗಿತರಂಗ’ ಚಿತ್ರಕ್ಕೂ ಕ್ಯಾಮೆರಾ ಹಿಡಿದಿದ್ದ ವಿಲಯಮ್ ಡೇವಿಡ್ ಅವರೇ ಇಲ್ಲೂ ಕ್ಯಾಮೆರಾ ಹಿಡಿಯುತ್ತಿದ್ದಾರೆ. “ರಂಗಿತರಂಗ’ ಚಿತ್ರದಲ್ಲಿ ನಾಯಕಿಯಾಗಿದ್ದ ಆವಂತಿಕಾ ಶೆಟ್ಟಿ ಇಲ್ಲೂ ಕೂಡ ನಾಯಕಿಯಾಗಿ ಇದ್ದರೆ, ಚಿತ್ರದಲ್ಲಿ ಖಳನಟ ರವಿಶಂಕರ್ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ.
-ಉದಯವಾಣಿ
Comments are closed.