ಮುಂಬೈ: ಒಂದು ಕಾಲದ ಹಾಟ್ ಕಪಲ್ ಎಂದೇ ಖ್ಯಾತಿಗಳಿಸಿದ್ದ ನಟ ಸಲ್ಮಾನ್ ಖಾನ್ ಹಾಗೂ ಕತ್ರಿನಾ ಕೈಫ್ ಜೋಡಿ ಕಾರಣಾಂತರಗಳಿಂದ ಬೇರ್ಪಟ್ಟಿತ್ತು. ಬಳಿಕ ಒಬ್ಬರನ್ನು ಕಂಡರೆ ಮತ್ತೊಬ್ಬರಿಗಾಗದು ಎನ್ನುವ ರೀತಿಯಲ್ಲಿದ್ದರು. ನಟ ಸಲ್ಮಾನ್ ಖಾನ್ ಅಂತು ತಮಗೆ ಅವಕಾಶ ಸಿಕ್ಕಾಗಲೆಲ್ಲಾ ಕತ್ರಿನಾ ಕೈಫ್ ರ ಕಾಲೆಳೆಯುತ್ತಿದ್ದರು. ಕ್ಯಾಟ್ ಕೂಡ ಸಲ್ಲು ಕೀಟಲೆಗೆ ಖಾರವಾಗಿಯೇ ಉತ್ತರಿಸುತ್ತಿದ್ದಳು.
ಆದರೆ ಇದೀಗ ಈ ಜೋಡಿ ತಮ್ಮ ಹಳೆಯ ವೈಶಮ್ಯವನ್ನು ಮರೆತು ಸ್ನೇಹದತ್ತ ಮುಖ ಮಾಡಿದೆಯಂತೆ. ಇನ್ನು ಸಲ್ಮಾನ್ ಖಾನ್ ಸಹೋದರ ಸೊಹೇಲ್ ಖಾನ್ ನಿರ್ದೇಶನದ ಫ್ರೀಕಿ ಅಲಿ ಚಿತ್ರ ಇದೇ ನವೆಂಬರ್ 9ರಂದು ಬಿಡುಗಡೆಯಾಗುತ್ತಿದ್ದು, ಅಂದೇ ಕತ್ರಿನಾ ಕೈಫ್ ಅಭಿನಯದ ಬಾರ್ ಬಾರ್ ದೆಕೋ ಚಿತ್ರ ಕೂಡ ತೆರೆಕಾಣುತ್ತಿದೆ. ಹೀಗಾಗಿ ಇಬ್ಬರು ಖ್ಯಾತ ನಟರ ನಡುವೆ ತಮ್ಮ-ತಮ್ಮ ಚಿತ್ರಗಳ ಪೈಪೋಟಿ ಏರ್ಪಡುತ್ತದೆ ಎಂದು ಹೇಳಲಾಗುತ್ತಿತ್ತು.
ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ನಟ ಸಲ್ಮಾನ್ ಖಾನ್, ಕತ್ರಿನಾ ಅಭಿನಯದ ಬಾರ್ ಬಾರ್ ದೇಕೋ ಚಿತ್ರ ಉತ್ತಮ ಚಿತ್ರವಾಗಿದ್ದು, ಫ್ರೀಕಿ ಅಲಿ ವಿಭಿನ್ನ ಆಯಾಮದ ಚಿತ್ರವಾಗಿದೆ. ಹೀಗಾಗಿ ಎರಡೂ ಚಿತ್ರಗಳ ನಡುವೆ ಯಾವುದೇ ರೀತಿಯ ಸ್ಪರ್ಧೆ ಏರ್ಪಡುವುದಿಲ್ಲ ಎಂದು ಹೇಳಿದ್ದಾರೆ. ಆ ಮೂಲಕ ಕತ್ರಿನಾ ಕೈಫ್ ಚಿತ್ರಕ್ಕೆ ತಾವು ಪ್ರತಿಸ್ಪರ್ಧಿಯಲ್ಲ ಎಂದು ಸಲ್ಲು ಸ್ಪಷ್ಟಪಡಿಸಿದ್ದಾರೆ.
ಸೊಹೇಲ್ ಖಾನ್ ನಿರ್ದೇಶನದ ಫ್ರೀಕಿ ಅಲಿ ಚಿತ್ರದಲ್ಲಿ ಖ್ಯಾತ ನಟ ನವಾಜುದ್ದೀನ್ ಸಿದ್ಧಿಕಿ, ಆ್ಯಮಿ ಜಾಕ್ಸನ್ ಹಾಗೂ ಅರ್ಬಾಜ್ ಖಾನ್ ಪ್ರಮುಖ ಭೂಮಿಕೆಯಲ್ಲಿ ನಟಿಸಿದ್ದಾರೆ.
Comments are closed.