ಬೆಂಗಳೂರು: ನಿಮಗೆ ಗೊತ್ತಿರುವ ಹಾಗೇ ಸ್ಯಾಂಡಲ್‌ವುಡ್‌ಗೆ ಡೈಲಾಂಗ್ ಕಿಂಗ್ ಸಾಯಿಕುಮಾರ್ ಪುತ್ರ ಆದಿ ಎಂಟ್ರಿ ನೀಡುತ್ತಿದ್ದಾರೆ. ಚೊಚ್ಚಲ ಸಿನಿಮಾದ ಮೂಲಕ ಕನ್ನಡ ಚಿತ್ರದಲ್ಲಿ ಮೊದಲ ಬಾರಿಗೆ ನಟಿಸುತ್ತಿರುವ ಆದಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಸ್ಯಾಂಡಲ್‌ವುಡ್‌ನಲ್ಲಿ ಆದಿ ತಮ್ಮ ಅದೃಷ್ಟವನ್ನು ಪ್ರಯತ್ನಿಸಲು ಬರುತ್ತಿದ್ದಾರೆ. ನನ್ನ ತಂದೆ ಕನ್ನಡದ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ನನ್ನ ತಂದೆಯವರನ್ನು ಪ್ರೇಕ್ಷಕರು ಇಷ್ಟಪಡುತ್ತಾರೆ. ಅಲ್ಲದೇ ನನ್ನ ಅಂಕಲ ಪಿ. ರವಿಶಂಕರ್ ಕೂಡ ಸ್ಯಾಂಡಲ್‌ವುಡ್‌ನಲ್ಲಿ ಪಾಪ್ಯೂಲರ್ ಆ್ಯಕ್ಟರ್ ಆಗಿದ್ದಾರೆ. ನಾನು 8 ತೆಲಗು ಚಿತ್ರಗಳ ಶೂಟ್ ಕಂಪ್ಲೀಟ್ ಮಾಡಿದ್ದೇನೆ. ಕನ್ನಡದಲ್ಲೂ ಟ್ರೈ ಮಾಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ನಟ ಸಾಯಿಕುಮಾರ್ ಕನ್ನಡಭಿಮಾನಿಗಳ ಪಾಲಿನ ಅತ್ಯಂತ ಪ್ರೀತಿಯ ನಟ. ಪೊಲೀಸ್ ಪಾತ್ರಗಳನ್ನು ಮಾಡಬೇಕು ಅಂದ್ರೆ ಅದಕ್ಕೆ ಸಾಯಿಕುಮಾರ್ ಅವರೇ ಬೇಕು ಅನ್ನುವ ಕಾಲವೊಂದಿತ್ತು. ಸದ್ಯ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡ್ರೂ ಸಾಯಿಕುಮಾರ್ ಅವರಿಗೆ ಬೇಡಿಕೆಯೇನೂ ಕಡಿಮೆಯಾಗಿಲ್ಲ. ಆದ್ರೆ ಇದೀಗ ಅವರ ಮಗನ ಸರದಿ.
ತೆಲುಗಿನ ಸೂಪರ್ ಹಿಟ್ ‘ಕಾರ್ತಿಕೇಯ’ ಚಿತ್ರವನ್ನು ಕನ್ನಡಕ್ಕೆ ರಿಮೇಕ್ ಮಾಡುತ್ತಿದ್ದು, ಸಾಯಿ ಪುತ್ರ ಆದಿಯನ್ನು ಈ ಚಿತ್ರದ ಮೂಲಕ ಕನ್ನಡ ಸಿನಿಮಾ ರಂಗಕ್ಕೆ ಪರಿಚಯಿಸಲು ವೇದಿಕೆ ಸಿದ್ಧಗೊಂಡಿದೆ.ಅಂದ್ಹಾಗೆ ಆದಿ ಅಭಿನಯದ ಚೊಚ್ಚಲ ಚಿತ್ರ ತೆಲುಗಿನ ‘ಪ್ರೇಮ ಕಾವಾಲಿ’ಯಲ್ಲಿನ ನಟನೆಗೆ ಪ್ರಶಸ್ತಿ ಬಂದಿತ್ತು.
ಈಗಾಗಲೇ ಸಾಯಿಕುಮಾರ್ ಹಾಗೂ ಸಹೋದರ ರವಿಶಂಕರ್ ಅವರು ಕನ್ನಡದಲ್ಲಿ ಬಹು ಬೇಡಿಕೆಯ ನಟರು ಎನ್ನಿಸಿಕೊಂಡಿದ್ದಾರೆ. ಸಾಯಿಕುಮಾರ್ ಅವರಿಗೆ ನನ್ನ ಮಗನನ್ನು ಸ್ಯಾಂಡಲ್ ವುಡ್ ಗೆ ಪರಿಚಯಿಸಬೇಕು ಅನ್ನೋದು ಬಹು ದಿನದ ಆಸೆ. ಇದೀಗ ಆ ಆಸೆ ಈಡೇರುವ ದಿನ ಕೂಡಿ ಬಂದಿದೆಯಂತೆ.
Comments are closed.