ಮನೋರಂಜನೆ

ಕಳಪೆ ಪ್ರದರ್ಶನದಿಂದ ಬೇರ್ಪಡಲು ಮುಂದಾದ ಸ್ಟಾರ್ ಜೋಡಿ ಸಾನಿಯಾ-ಹಿಂಗೀಸ್

Pinterest LinkedIn Tumblr

Hingis-Saniaನವದೆಹಲಿ: ಟೆನ್ನಿಸ್ ಜಗತ್ತಿನ ನಂಬರ್ ಒನ್ ಮಹಿಳಾ ಜೋಡಿ ಭಾರತದ ಸಾನಿಯಾ ಮಿರ್ಜಾ ಮತ್ತು ಸ್ವಿಜರ್ ಲೆಂಡ್ ನ ಮಾರ್ಟಿನಾ ಹಿಂಗೀಸ್ ಜೋಡಿ ಇದೀಗ ಕಳಪೆ ಪ್ರದರ್ಶನದಿಂದಾಗಿ ಬೇರ್ಪಡಲು ನಿರ್ಧರಿಸಿದ್ದಾರೆ.

2015 ಮತ್ತು 2016ರಲ್ಲಿ ಅನೇಕ ಪ್ರಶಸ್ತಿಗಳನ್ನು ಗೆದ್ದಿದ್ದ ಈ ಸ್ಟಾರ್ ಜೋಡಿ ಬೇರ್ಪಡಲು ನಿರ್ಧರಿಸಿರುವುದು ಅನಿರೀಕ್ಷಿತ ಬೆಳವಣಿಗೆಯಾಗಿದೆ. ಇನ್ನು ತಾವು ಬೇರ್ಪಡುತ್ತಿರುವ ಸಂಬಂಧ ಅವರು ಜಂಟಿ ಹೇಳಿಕೆ ನೀಡಿದ್ದಾರೆ.

3 ಗ್ರಾಂಡ್ ಸ್ಲಾಮ್ ಮತ್ತು 11 ಡಬ್ಲ್ಯೂಟಿಎ ಪ್ರಶಸ್ತಿಗಳನ್ನು ನಾವಿಬ್ಬರೂ ಜತೆಯಾಗಿ ಗೆದ್ದಿದ್ದೇವೆ. ಆದರೆ ಇತ್ತೀಚಿನ ದಿನಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ಪ್ರದರ್ಶನ ನೀಡಲು ಸಾಧ್ಯವಾಗುತ್ತಿಲ್ಲ ಹೀಗಾಗಿ ಪರಸ್ಪರ ಒಪ್ಪಿಗೆಯೊಂದಿಗೆ ಬೇರ್ಪಡಲು ನಿರ್ಧರಿಸಿದ್ದಾರಂತೆ.

Comments are closed.