ರಿಯೊ ಡಿ ಜನೈರೊ: ಭಾರತದ ಗಾಲ್ಫ್ ಆಟಗಾರ್ತಿ ಅದಿತಿ ಅಶೋಕ್ ರಿಯೊ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಭರವಸೆ ಮೂಡಿಸಿದ್ದಾರೆ.
ಮಹಿಳೆಯರ ವಿಭಾಗದ ವೈಯಕ್ತಿಕ ಸ್ಪರ್ಧೆಯಲ್ಲಿ ಅದಿತಿ ಮೊದಲ ಸುತ್ತಿನಲ್ಲಿ 68 ಮತ್ತು ಎರಡನೇ ಸುತ್ತಿನಲ್ಲಿ 68 ಪಾಯಿಂಟ್ಸ್ ಗಳಿಸಿ 8ನೇ (ಟಿ8) ಸ್ಥಾನದಲ್ಲಿದ್ದಾರೆ.
18ರ ಹರೆಯದ ಅದಿತಿ ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುತ್ತಿರುವ ಭಾರತದ ಕ್ರೀಡಾಪಟುಗಳಲ್ಲಿ ಅತ್ಯಂತ ಕಿರಿಯ ಸ್ಪರ್ಧಿ.
ಶ್ರೇಯಾಂಕದ ಆಧಾರದ ಮೇಲೆ ಬೆಂಗಳೂರು ಮೂಲದ ಇವರಿಗೆ ರಿಯೊಗೆ ತೆರಳಲು ಅವಕಾಶ ಲಭಿಸಿದೆ. ಏಷ್ಯನ್ ಕ್ರೀಡಾಕೂಟ ಹಾಗೂ ಯೂತ್ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿದ್ದ ಇವರು ಬ್ರಿಟಿಷ್ ಹವ್ಯಾಸಿ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದ ಭಾರತದ ಮೊದಲ ಮಹಿಳೆ.
Comments are closed.