ರವಿವಾರ ಬಿಗ್‌ಬಾಸ್‌ಮನೆಯಲ್ಲಿ ಸಂಜನಾ ಹಾಗು ಕಾರುಣ್ಯ ಕನ್ನಡಿ ನೋಡುತ್ತಿದ್ದ ವೇಳೆ ಯಾವುದೋ ಒಂದು ವಸ್ತು ಹಾದುಹೋಗುದನ್ನು ಕಂಡು ಇಬ್ಬರು ಕೂಗಾಡಿದ್ದು, ಚೀರಾಡಿದ್ದು ದೊಡ್ಡ ಸುದ್ದಿ ಆಗಿತ್ತು. ಬಿಗ್‌ಬಾಸ್‌ಮನೆಯಲ್ಲಿ ಭೂತ ಇದೆ ಎಂಬಿತ್ಯಾದಿ ಮಾತುಗಳು ಕೂಡ ಈ ವೇಳೆ ಕೇಳಿ ಬಂದಿದ್ದವು.
ಬಾತ್ರೂಮ್ ಬಳಿ ಸಂಜನಾ ಒಬ್ಬಳೇ ಇದ್ದಾಗ ಯಾವುದೋ ಒಂದು ಆಕೃತಿ ಕಂಡಿದೆ. ಆಗ ಅವರು ಕಿರುಚಿಕೊಂಡು ಹೊರಗೆ ಓಡಿಬಂದಿದ್ದಾರೆ. ಆದ್ರೆ ಮನೆ ಸದಸ್ಯರು ಇದನ್ನ ಜೋಕ್‌ಥರಾ ಕಂಡರು. ಬಳಿಕ ಕಾರುಣ್ಯ ಜೊತೆ ಸಂಜನಾ ಬಾತ್‌ರೂಂಗೆ ಹೋದರು. ಆಗ ಅದೇ ಆಕೃತಿ ಮತ್ತೆ ಕನ್ನಡಿಯಲ್ಲಿ ಕಂಡಿದೆ. ಆಗ ಇಬ್ಬರೂ ಜೋರಾಗಿ ಕಿರುಚಿಕೊಂಡಿದ್ದಾರೆ.
ಆಗ ಮನೆ ಮಂದಿ ಎಲ್ಲರೂ ಬಂದು ಪರಿಶೀಲನೆ ನಡೆಸಿದರು. ಜೊತೆಗೆ ಇದು ತಮಾಷೆ ಎಂದು ಅವರವರೇ ಹೇಳಿಕೊಂಡು ನಕ್ಕರು. ಆದರೆ ಕಾರುಣ್ಯ ಇದು ನಿಜ ಎಂದು ಆಣೆ ಕೂಡ ಮಾಡಿದಳು. ಅದು ಆಕೃತಿಯಲ್ಲ. ಅದರ ಮುಖದಲ್ಲಿ ರಕ್ತ ಇದ್ದಿದ್ದನ್ನು ನೋಡಿದ್ದೇನೆ ಎಂದು ಕಾರುಣ್ಯ ಆಂಜನೇಯನ ಮೇಲೆ ಪ್ರಮಾಣ ಮಾಡಿದಳು. ನಾವು ಆ ಆಕೃತಿ ನೋಡಿದ್ದು ನಿಜ. ಯಾರೋ ಅಲ್ಲಿ ಬಂದು ಹೋದ ಹಾಗೆ ಆತು ಅಂದರು. ಅದರ ಮುಖದಲ್ಲಿ ರಕ್ತವೂ ಇತ್ತು ಅಂತಾ ಹೇಳಿದರು.
Comments are closed.