ಮನೋರಂಜನೆ

ಉದಯ್ ಮತ್ತು ಅನಿಲ್ ನೀರಿನ ಧುಮುಕಿದ ಬಳಿಕ ಏನೇನಾಯ್ತು..?

Pinterest LinkedIn Tumblr

anilಬೆಂಗಳೂರು(ನ.08): ಮಾಸ್ತಿಗುಡಿ ಸಿನಿಮಾ ಕ್ಲೈಮ್ಯಾಕ್ಸ್ ಶೂಟಿಂಗ್ ವೇಳೆ ದೊಡ್ಡ ಅವಘಡವೇ ನಡೆದುಹೋಗಿದೆ. ಸಾಹಸ ದೃಶ್ಯ ಶೂಟಿಂಗ್ ವೇಳೆ 100 ಅಡಿ ಎತ್ತರದಲ್ಲಿದ್ದ ಹೆಲಿಕಾಪ್ಟರ್`ನಿಂದ ನೀರಿಗೆ ಜಿಗಿದ ಖಳನಾಯಕರಾದ ುದಯ್ ಮತ್ತು ಅನಿಲ್ ಸಾವಿಗೀಡಾಗಿದ್ದಾರೆ. ಇದುವರೆಗೂ ಅವರ ಶವ ಸಿಕ್ಕಿಲ್ಲ. ಶವಗಳ ಹುಡುಕಾಟ ಭರದಿಂದ ಸಾಗಿದೆ. ಅಂದಹಾಗೆ, ನಿನ್ನೆ ಮಧ್ಯಾಹ್ನ ಶುಟಿಂಗ್ ಸಂದರ್ಭದಿಂದ ಹಿಡಿದು ಇಂದು ಮಧ್ಯಾಹ್ನದವರೆಗೆ ನಡೆದ ಕಾರ್ಯಾಚರಣೆಯ ಕಾಲಾನುಕ್ರಮದ ವಿವರ ಇಲ್ಲಿದೆ.
– ನಿನ್ನೆ (ನ.7] ಮಧ್ಯಾಹ್ನ 2.30 : ಸ್ಟಂಟ್ ಅನಾಹುತ. ಇಬ್ಬರು ಕಲಾವಿದರ ದುರ್ಮರಣ
– ನಿನ್ನೆ ಮಧ್ಯಾಹ್ನ 2.45 : ನೀರಿನಲ್ಲಿ ಮುಳುಗಿದವರ ರಕ್ಷಣಾ ಕಾರ್ಯಾಚರಣೆ
– ನಿನ್ನೆ ಮಧ್ಯಾಹ್ನ 3 ಗಂಟೆ : ನೀರಿನಲ್ಲಿ ಮುಳುಗಿದ್ದ ಕಲಾವಿದರ ನಿಧನ ಖಚಿತ
– ನಿನ್ನೆ ಮಧ್ಯಾಹ್ನ 3.30 : ಮೃತದೇಹ ಪತ್ತೆ ಕಾರ್ಯಾಚರಣೆ ಆರಂಭ
– ಮಧ್ಯರಾತ್ರಿ 12 ಗಂಟೆ :ಕತ್ತಲಿನ ಹಿನ್ನೆಲೆ ಕಾರ್ಯಾಚರಣೆ ಸ್ಥಗಿತ
– ಬೆಳಗ್ಗೆ 7 ಗಂಟೆ : ಅನಿಲ್, ಉದಯ್ ಮೃತದೇಹ ಶೋಧ ಆರಂಭ
– ಬೆಳಗ್ಗೆ 7.30 : ತಿಪ್ಪಗೊಂಡನಹಳ್ಳಿ ಡ್ಯಾಂನಲ್ಲಿ NDRF, SBRI ಜಂಟಿ ಕಾರ್ಯಾಚರಣೆ
– ಬೆಳಗ್ಗೆ 7.30 : ಸ್ವತಃ ಕಾರ್ಯಾಚರಣೆಗೆ ಇಳಿದ ದುನಿಯಾ ವಿಜಯ್
– ಬೆಳಗ್ಗೆ 7.30 : 25 ಸಿಬ್ಬಂದಿಯಿಂದ ಮೃತದೇಹ ಪತ್ತೆ ಕಾರ್ಯಾಚರಣೆ
– ಬೆಳಗ್ಗೆ 9 ಗಂಟೆ : ಘಟನಾ ಸ್ಥಳಕ್ಕೆ ಶಿವರಾಜ್ ಕುಮಾರ್ ಆಗಮನ
– ಬೆಳಗ್ಗೆ 9.30 : ವಾಕಿಟಾಕಿಯಲ್ಲಿ ಸ್ಥಳದ ಮಾಹಿತಿ ನೀಡಿದ ನಟ ಪ್ರೇಮ್
– ಬೆಳಗ್ಗೆ 10 ಗಂಟೆ : ಬೆಳಗಿನ ಉಪಾಹಾರಕ್ಕೆ ಕಾರ್ಯಾಚರಣೆ ಸ್ಥಗಿತ
– ಬೆಳಗ್ಗೆ 10.30 : ಮತ್ತೆ ಮೃತದೇಹ ಪತ್ತೆ ಕಾರ್ಯಾಚರಣೆ ಶುರು
– ಬೆಳಗ್ಗೆ 11 ಗಂಟೆ : ಮಂಜಣ್ಣ ಅವರ ರೋಬೋಗೆ ಬಟ್ಟೆಯ ತುಂಡು ಸಿಕ್ಕಿತು
– ಮಧ್ಯಾಹ್ನ 1 ಗಂಟೆ : ಮೃತ ನಟ ಉದಯ್ ಮನೆಗೆ ದುನಿಯಾ ವಿಜಿ ಪತ್ನಿ ನಾಗರತ್ನ ಭೇಟಿ
– ಮಧ್ಯಾಹ್ನ 1.30 : ನಟ ಉದಯ್ ಮನೆಗೆ ಸಾ.ರಾ. ಗೋವಿಂದು ಭೇಟಿ
– ಮಧ್ಯಾಹ್ನ 2 ಗಂಟೆ : ಊಟ ಮತ್ತು ವಿಶ್ರಾಂತಿಗಾಗಿ ಕಾರ್ಯಾಚರಣೆ ಮತ್ತೆ ಸ್ಥಗಿತ

Comments are closed.