ಮನೋರಂಜನೆ

ಬಿಗ್‌ಬಾಸ್‌ ಮನೆಯಲ್ಲಿ ಕಣ್ಣೀರಿಟ್ಟ ‘ಕಿರಿಕ್’ ! ಪ್ರಥಮ್ ಹೇಳಿದ್ದೇನು..?

Pinterest LinkedIn Tumblr

kirik

ಬೆಂಗಳೂರು: ಬಿಗ್‌ಬಾಸ್‌ ಮನೆಯಲ್ಲಿ ನಿನ್ನೆ ನಡೆದ ಘಟನೆಯೊಂದರಲ್ಲಿ ಕಿರಿಕ್ ಕೀರ್ತಿ ಹಾಗು ಪ್ರಥಮ್ ಮಧ್ಯೆ ನಡೆದ ಅತಿರೇಕದ ವಾಗ್ಯುದ್ಧದಲ್ಲಿ ಕೀರ್ತಿ ಜೋರಾಗಿ ಕಣ್ಣೀರು ಸುರಿಸಿದ ಘಟನೆ ನಡೆಯಿತು.

ಈ ವಾರ ನಿರಂಜನ್‌ ನೇರವಾಗಿ ಪ್ರಥಮ್‌ರನ್ನ ನಾಮಿನೇಟ್‌ ಮಾಡಿದ ಕಾರಣ ನಿನ್ನೆ ಇವರಿಬ್ಬರ ಮಧ್ಯೆ ಮಾತಿಗೆ ಮಾತು ಬೆಳೆಯುತ್ತಿತ್ತು. ಈ ವೇಳೆ ಮಧ್ಯ ಪ್ರವೇಶಿಸಿದ ಕಿರಿಕ್ ಕೀರ್ತಿ ಜಗಳಕ್ಕಿಳಿದರು. ಇದರಿಂದ ಕೀರ್ತಿ ಮತ್ತು ಪ್ರಥಮ್‌ ಮಧ್ಯೆ ಅತಿರೇಕದ ಜಗಳ ಆಯ್ತು.

ಇದರಿಂದ ಕೋಪಗೊಂಡ ಪ್ರಥಮ್‌ ನೀವೆಲ್ಲ ಗುಂಪುಗಾರಿಕೆ ಮಾಡುತ್ತಿದ್ದೀರಾ, ಅಯೋಗ್ಯರು, ಅನಾಗರಿಕರು ಅಂತೆಲ್ಲ ಬೈಯುತ್ತ ನಿವೆಲ್ಲ ಮೊದಲೇ ಫಿಕ್ಸ್‌ ಆಗಿ ಇಲ್ಲಿ ಬಂದಿದ್ದೀರಿ’ ಎಂದು ಪ್ರಥಮ್‌ ಆರೋಪಿಸಿದರು.

ಪ್ರಥಮ್‌ನ ಈ ಮಾತುಗಳನ್ನ ಕೇಳಿದ ಕೀರ್ತಿ ತಮ್ಮ ತಾಳ್ಮೆಯನ್ನ ಕಳೆದುಕೊಂಡು, ಕೋಪವನ್ನು ಹೊರಹಾಕುತ್ತ ಭಾವುಕರಾಗಿ ಅಳತೊಡಗಿದರು. ಶಾಲಿನಿ, ಶೀತಲ್‌, ಭುವನ್‌ ಮತ್ತು ರೇಖಾ ಸೇರಿದಂತೆ ಮನೆಯ ಉಳಿದ ಸದಸ್ಯರು ಕೀರ್ತಿಯನ್ನ ಸಮಾಧಾನ ಮಾಡಲು ಮುಂದಾದರು. ಬಿಗ್‌ಬಾಸ್‌ ಸಹ ಕೀರ್ತಿಯನ್ನ ಕನ್ಫೇಷನ್‌ ರೂಮ್‌ಗೆ ಕರೆದು ಸಮಾಧಾನ ಹೇಳಿ, ತಾಳ್ಮೆ ಕಳೆದುಕೊಳ್ಳದಂತೆ ಸೂಚಿಸಿದರು.

ಈ ಮಧ್ಯೆ ಕೀರ್ತಿ ವಿಚಾರವಾಗಿ ಮೋಹನ್ ಕೂಡ ತಮ್ಮ ಅಸಮಾಧಾನವನ್ನು ಓಂಪ್ರಕಾಶ್ ಮುಂದೆ ವ್ಯಕ್ತಪಡಿಸಿದರು. ಪ್ರಥಮ್ ಅವರು ನಿರಂಜನ್ ವಿರುದ್ಧ ಮಾತನಾಡಿದಾಗೆಲ್ಲ ಕೀರ್ತಿ ಉತ್ತರಿಸುತ್ತಾನೆ. ಮನೆಯ ಕ್ಯಾಪ್ಟನ್ ಆಗಿ ನಿರಂಜನ್ ಏನು ಮಾಡುತ್ತಿಲ್ಲ. ಪ್ರಥಮ್ ಮಾಡುತ್ತಿರುದು ಸರಿ ಎಂಬ ದಾಟಿಯಲ್ಲಿ ಮೋಹನ್ ಮಾತನಾಡಿದರು.

ಈ ಘಟನೆ ಬಳಿಕ ಬಿಗ್‌ಬಾಸ್‌ ಮನೆಯಲ್ಲಿ ನಿರ್ದೇಶಕ ಓಂಪ್ರಕಾಶ್‌ಗೆ ಕರೆ ಮಾಡಿ ಕಿಚ್ಚ ಸುದೀಪ್‌ ಅಭಿನಯದ ‘ಹುಚ್ಚ’ ಚಿತ್ರವನ್ನ ಕಿರು ನಾಟಕದ ರೂಪದಲ್ಲಿ ಪ್ರದರ್ಶಿಸುವಂತೆ ಸೂಚನೆ ನೀಡಿದರು. ಈ ನಾಟಕದಲ್ಲಿ ಮನೆಯ ಮಂದಿ ಎಲ್ಲ ಪಾಲ್ಗೊಂಡು ಯಶಸ್ವಿಗೊಳಿಸಿದರು.

Comments are closed.