ಬೆಂಗಳೂರು: ಕನ್ನಡದ ಖ್ಯಾತ ನಟಿ ದೀಪಿಕಾ ಕಾಮಯ್ಯ ಅವರು ಭಾನುವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಬ್ಯಾಂಕ್ ಉದ್ಯೋಗಿ ಸುಮಂತ್ ರನ್ನು ಬೆಂಗಳೂರಿನಲ್ಲಿ ವರಿಸಿದ್ದಾರೆ.
ಶಾಸಕ ಆರ್ ವಿ ದೇವರಾಜ್ ಅವರ ಸಹೋದರನ ಮಗನಾಗಿರುವ ಸುಮಂತ್ ಗೋಪಿ ಅವರನ್ನು ದೀಪಿಕಾ ಅವರು ವರಿಸಿದ್ದು, ಬೆಂಗಳೂರಿನ ಸಿಂಗಸಂದ್ರದಲ್ಲಿರುವ ಮಣಿಪಾಲ್ ಕೌಂಟಿಯಲ್ಲಿ ವಿವಾಹ ಸಮಾರಂಭ ನಡೆದಿದೆ. ಸುಮಂತ್ ಗೋಪಿ ಮೂಲತಃ ನಾಯ್ಡುಗಳಾಗಿದ್ದು, ನಾಯ್ಡು ಸಂಪ್ರದಾಯದಂತೆ ವಿವಾಹ ಸಮಾರಂಭ ನಡೆಸಲಾಗಿದೆ. ವಿವಾಹ ಸಮಾರಂಭಕ್ಕೆ ದೀಪಿಕಾ ಮತ್ತು ಸುಮಂತ್ ಅವರ ಕುಟುಂಬಸ್ಥರು ಮತ್ತು ಕೆಲವೇ ಆಪ್ತರನ್ನು ಮಾತ್ರ ಆಹ್ವಾನಿಸಲಾಗಿತ್ತು ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ದೀಪಿಕಾ ಕಾಮಯ್ಯ ಅವರದ್ದು ಅರೇಂಜ್ಡ್ ಮ್ಯಾರೇಜ್ ಆಗಿದ್ದು, ಸುಮಂತ್ ಗೋಪಿ ಅವರನ್ನು ದೀಪಿಕಾ ಅವರ ಪೋಷಕರೇ ಆರಿಸಿದ್ದು, ಪೋಷಕರ ಆಯ್ಕೆಯಂತೆ ದೀಪಿಕಾ ವಿವಾಹ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಸುಮಂತ್ ಗೋಪಿ ಬ್ಯಾಂಕ್ ಉದ್ಯೋಗಿಯಾಗಿದ್ದು, ಆಸ್ಟ್ರೇಲಿಯಾ ಮೂಲದ ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ದರ್ಶನ್ ಅಭಿನಯದ ಚಿಂಗಾರಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯರಾದ ದೀಪಿಕಾ ಕಾಮಯ್ಯ ಅವರು ಬಳಿಕ ಕನ್ನಡದ ಬಿಗ್ ಬಾಸ್ ಕಾರ್ಯಕ್ರಮದ ಮೂಲಕ ಖ್ಯಾತಿಗಳಿಸಿದ್ದರು.
ಮನೋರಂಜನೆ
Comments are closed.