ಮನೋರಂಜನೆ

ಶಾರುಖ್ ಖಾನ್ ಅಭಿನಯದ ರಯೀಸ್ ಟ್ರೇಲರ್ ಬಿಡುಗಡೆ

Pinterest LinkedIn Tumblr

rayeesಶಾರುಖ್ ಖಾನ್ ಅಭಿಮಾನಿಗಳು ಬಹುದಿನಗಳಿಂದ ಕಾದಿದ್ದ ‘ರಯೀಸ್’ ಟ್ರೇಲರ್ ಇಂದು (ಡಿ.7) ಬಿಡುಗಡೆಯಾಗಿದೆ. ದೇಶದ 9 ಪ್ರಮುಖ ನಗರಗಳಲ್ಲಿ ಏಕಕಾಲಕ್ಕೆ ಆಯ್ದ ಕೆಲವು ಅಭಿಮಾನಿಗಳ ಸಮ್ಮುಖದಲ್ಲಿ ಚಿತ್ರದ ಟ್ರೇಲರ್ ಬಿತ್ತರಗೊಂಡಿದ್ದು ವಿಶೇಷ.

ಕಳೆದ ಒಂದು ವಾರದಿಂದ ‘ವಿಜಯವಾಣಿ’ ಪತ್ರಿಕೆಯ ಸಹಯೋಗದಲ್ಲಿ ಕರ್ನಾಟಕದ ಜನತೆಗೆ ಕೆಲವು ಪ್ರಶ್ನೆಗಳನ್ನು ಕೇಳುವ ಮೂಲಕ ಚಿತ್ರತಂಡ ಕ್ವಿಝå್ ಏರ್ಪಡಿಸಿತ್ತು. ಸರಿ ಉತ್ತರ ನೀಡಿದ 20 ಅದೃಷ್ಟಶಾಲಿಗಳಿಗೆ ಶಾರುಖ್ ಜತೆ ವೀಡಿಯೋ ಕಾನ್ಪರೆನ್ಸ್ ಮೂಲಕ ನೇರವಾಗಿ ಮಾತನಾಡುವ ಅವಕಾಶ ಕಲ್ಪಿಸಲಾಗಿತ್ತು. ಇದೇ ವೇಳೆ ಯುಟ್ಯೂಬ್ನಲ್ಲಿ ಟ್ರೇಲರ್ ಕೂಡ ರಿಲೀಸ್ ಆಗಿದ್ದು, ಕೆಲವೇ ನಿಮಿಷಗಳಲ್ಲಿ ಎರಡೂವರೆ ಲಕ್ಷಕ್ಕೂ ಅಧಿಕ ಜನರಿಂದ ವೀಕ್ಷಿಸಲ್ಪಟ್ಟಿದೆ.

Comments are closed.