ಮುಂಬೈ: ಬಾಲಿವುಡ್ ಖ್ಯಾತ ನಟ ಶಾರುಖ್ ಖಾನ್ ಅವರು ಸಲ್ಮಾನ್ ಖಾನ್ ಜೊತೆಗೆ ನಟಿಸಲು ಸಿದ್ಧ ಎಂದು ತಿಳಿಸುವ ಮೂಲಕ ತಮ್ಮಿಬ್ಬರ ಆಭಿಮಾನಿಗಳಿಗೂ ಸಿಹಿ ಸುದ್ಧಿ ನೀಡಿದ್ದಾರೆ.
ಸ್ಟಾರ್ ಸ್ಕ್ರೀನ್ ಅವಾರ್ಡ್ ಕಾರ್ಯಕ್ರಮದ ವೇಳೆ ಮಾತನಾಡಿದ ಈ ಇಬ್ಬರು ನಟರು ಒಟ್ಟಾಗಿ ನಟಿಸುವ ಬಗ್ಗೆ ಸುಳಿವು ನೀಡಿ ಬಾಲಿವುಡ್ ಅಂಗಳದಲ್ಲಿ ಮತ್ತೊಂದು ದೊಡ್ಡ ಬಜೆಟ್ ಸಿನಿಮಾ ನಿರ್ಮಾಣವಾಗುವ ಸೂಚನೆ ನೀಡಿದ್ದಾರೆ.
ಸಲ್ಮಾನ್ ಖಾನ್ ಹಾಗೂ ನೀವು ಮತ್ತೆ ಒಟ್ಟಾಗಿ ನಟಿಸುವ ಚಿತ್ರವನ್ನು ನೋಡುವ ಅವಕಾಶ ಸಿನಿಪ್ರಿಯರಿಗೆ ಸಿಗುತ್ತದೆಯೇ ಎಂದು ಮಾದ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಶಾರುಖ್ ‘ಕರಣ್ ಅರ್ಜುನ್’, ‘ಹಮ್ ತುಮಾರೆ ಹೈ ಸನಾಮ್’, ‘ಕುಛ್ ಕುಛ್ ಹೋತಾ ಹೈ’ ನಂತಹ ಒಳ್ಳೆಯ ಕತೆಗಳು ದೊರೆತರೆ ಒಟ್ಟಿಗೆ ನಟಿಸುತ್ತೇವೆ ಎಂದಿದ್ದಾರೆ.
ಇದಕ್ಕೆ ಧನಿಗೂಡಿಸಿರುವ ಸಲ್ಮಾನ್, ಒಳ್ಳೆಯ ಕತೆ ಜೊತೆಗೆ ಉತ್ತಮ ನಿರ್ದೇಶಕರು ಸಿಕ್ಕಲ್ಲಿ ಖಂಡಿತ ನಟಿಸುತ್ತೇವೆ ಎಂದು ಹೇಳುವ ಮೂಲಕ ಶೀಘ್ರದಲ್ಲೇ ಇಬ್ಬರು ಜನಪ್ರಿಯ ನಟರು ಒಂದೇ ಸಿನಿಮಾದಲ್ಲಿ ತೆರೆ ಹಂಚಿಕೊಳ್ಳಲು ಉತ್ಸುಕರಾಗಿರವುದಾಗಿ ಒಪ್ಪಿಕೊಂಡಿದ್ದಾರೆ.
Comments are closed.