ಮನೋರಂಜನೆ

ತ್ರಿಷಾ ಈಗ ಪಂಚಭಾಷಾ ತಾರೆ

Pinterest LinkedIn Tumblr

trishaಎಲ್ಲ ಅಂದುಕೊಂಡಂತೆ ಆಗಿದ್ದರೆ, ನಟಿ ತ್ರಿಷಾ ಇಷ್ಟೊತ್ತಿಗಾಗಲೇ ಮದುವೆ ಆಗಿ ಸುಖಸಂಸಾರ ನಡೆಸಬೇಕಿತ್ತು. ಉದ್ಯಮಿ ವರುಣ್ ಮೆನಿಯನ್ ಜತೆ ಅವರ ವಿವಾಹ ನಿಶ್ಚಿತಾರ್ಥ ಕೂಡ ನಡೆದಿತ್ತು. ಕಾರಣಾಂತರಗಳಿಂದ ಮದುವೆ ನೆರವೇರಲೇ ಇಲ್ಲ! ಹಾಗಂತ ಅವರೇನು ಸುಮ್ಮನೆ ಕುಳಿತಿಲ್ಲ. ಸಿಕ್ಕಾಪಟ್ಟೆ ಸಿನಿಮಾಗಳ ಮೂಲಕ ಮತ್ತೆ ಸದ್ದು ಮಾಡುತ್ತಲೇ ಇದ್ದಾರೆ ಅವರು. ತಮಿಳು, ತೆಲುಗು, ಕನ್ನಡ, ಹಿಂದಿ ಚಿತ್ರಗಳಲ್ಲಿ ನಟಿಸಿರುವ ಅವರು ಇದೀಗ ಮಲಯಾಳಂಗೂ ಎಂಟ್ರಿ ನೀಡಿ ಪಂಚಭಾಷಾ ತಾರೆಯಾಗಿದ್ದಾರೆ. ಮಾಲಿವುಡ್ನ ಸ್ಟಾರ್ ನಟ ನಿವಿನ್ ಪೌಲಿ ನಟಿಸಲಿರುವ ಈ ಚಿತ್ರಕ್ಕೆ ಅವರು ನಾಯಕಿಯಾಗಿದ್ದಾರೆ.

ಈ ಚಿತ್ರವನ್ನು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಶ್ಯಾಮ್್ರಸಾದ್ ನಿರ್ದೇಶನ ಮಾಡಲಿದ್ದು, ತ್ರಿಷಾ ಆಯ್ಕೆ ಬಗ್ಗೆ ಸ್ವತಃ ಅವರೇ ಅಧಿಕೃತ ಮಾಹಿತಿ ಒದಗಿಸಿದ್ದಾರೆ. ‘ಮಂಗಳೂರು ಮತ್ತು ಕೊಚ್ಚಿ ಹಿನ್ನೆಲೆಯಲ್ಲಿ ಸಿನಿಮಾ ಮೂಡಿಬರಲಿದೆ. ಸಂಪೂರ್ಣ ಮ್ಯೂಸಿಕಲ್- ರೊಮ್ಯಾಂಟಿಕ್ ಚಿತ್ರ ಇದಾಗಿರಲಿದೆ’ ಎನ್ನುವ ಅವರು ಹೆಚ್ಚೇನೂ ಮಾಹಿತಿ ನೀಡುವುದಿಲ್ಲ. ಮೂಲಗಳ ಪ್ರಕಾರ, ತ್ರಿಷಾಗೆ ಇಲ್ಲಿ ಮಲಯಾಳಿ ಹುಡುಗಿ ಪಾತ್ರವಂತೆ. 2017ರ ಮಾರ್ಚ್ನಲ್ಲಿ ಈ ಚಿತ್ರಕ್ಕೆ ಚಾಲನೆ ಸಿಗಲಿದೆ. ಇನ್ನು, ತ್ರಿಷಾಗೆ ಈ ಅವಕಾಶ ಸಿಕ್ಕಿರುವುದು ತುಂಬ ಖುಷಿ ನೀಡಿದೆ. ‘ಇಡೀ ವರ್ಷ ನನಗೆ ಚೆನ್ನಾಗಿತ್ತು. ನನಗಾಗಿ ನಿರ್ದೇಶಕರು ಒಳ್ಳೊಳ್ಳೆಯ ಕಥೆ ಬರೆದುಕೊಂಡು ಬರುತ್ತಿದ್ದಾರೆ. ಮಲಯಾಳಂನಿಂದ ಈಗಾಗಲೇ ಸಾಕಷ್ಟು ಅವಕಾಶಗಳು ಬಂದಿದ್ದವು. ಅದರಲ್ಲಿ ಕೆಲವೊಂದು ಚೆನ್ನಾಗಿದ್ದವು, ಆದರೆ ಕಾಲ್ಶೀಟ್ ಸಮಸ್ಯೆಯಿಂದ ಒಪ್ಪಿಕೊಳ್ಳಲು ಆಗಿರಲಿಲ್ಲ. ಅಂತೆಯೇ ಈ ಬಾರಿಯೂ ನನ್ನ ಕಾಲ್ಶೀಟ್ ಮುಂದಿನ ಆರು ತಿಂಗಳವರೆಗೆ ಫ್ರೀ ಇರಲಿಲ್ಲ. ಆದರೆ ಕಥೆ ಕೇಳಿದ ಮೇಲೆ ಒಪ್ಪಿಕೊಳ್ಳದೆ ಇರಲು ಸಾಧ್ಯವಾಗಲಿಲ್ಲ. ನಟನೆಗೆ ಸಿಕ್ಕಾಪಟ್ಟೆ ಅವಕಾಶ ಇದೆ’ ಎನ್ನುತ್ತಾರ ತ್ರಿಷಾ.

ಸದ್ಯ ತ್ರಿಷಾ ಕೈಯಲ್ಲಿ 3-4 ಸಿನಿಮಾಗಳಿವೆ. ಅವರು ನಟಿಸಿರುವ ಮೂರು ಚಿತ್ರಗಳು ಈ ವರ್ಷ ತೆರೆಕಂಡಿವೆ. ಅತ್ತ ನಿವಿನ್ ಪೌಲಿ ಕನ್ನಡದ ‘ಉಳಿದವರು ಕಂಡಂತೆ’ ಚಿತ್ರದ ತಮಿಳು ರಿಮೇಕ್ನಲ್ಲಿ ಬಿಜಿ ಆಗಿದ್ದಾರೆ.

Comments are closed.