ಶನಿವಾರ ಬಿಗ್‌ಬಾಸ್ ಮನೆಯಿಂದ ಹೊಸದಾಗಿ ಮನೆಗೆ ಬಂದಿದ್ದ ಮಸ್ತಾನ್ ಹೊರಬಿದ್ದಿದ್ದಾರೆ. ಪ್ರಥಮ್ ಕಳೆದ ವಾರ ಸರ್ವಾಧಿಕಾರಿಯಾಗಿದ್ದ ವೇಳೆ ಮನೆಯೇ ಎಂಟ್ರಿ ನೀಡಿದ್ದ ಮಸ್ತಾನ್ ಒಂದೇ ವಾರದಲ್ಲಿ ಮನೆಯಿಂದ ಔಟ್ ಆಗಿದ್ದಾರೆ.
ಈ ವಾರ ಡೇಂಜರ್ ಜೋನ್‌ನಲ್ಲಿದ್ದದ್ದು ಸಂಜನಾ, ಶಾಲಿನಿ, ಮಸ್ತಾನ್, ಶೀತಲ್, ಕಾರುಣ್ಯ ಮತ್ತು ಭುವನ್. ಕಿಚ್ಚ ಸುದೀಪ್ ನಡೆಸುವ ಪಂಚಾಯತಿಯಲ್ಲಿ ಮಸ್ತಾನ್’ರನ್ನು ಬಿಗ್‌ಬಾಸ್ ಮನೆಯಿಂದ ಹೊರ ಹೋಗುವ ವ್ಯಕ್ತಿ ಎಂದು ಹೇಳುತ್ತಿದ್ದಂತೆ ಮಸ್ತಾನ್ ಮುಖ ಬಾಡಿತ್ತು.
ಈ ಬಾರಿ ಸುದೀಪ್ ಅವರು ಬಿಗ್‌ಬಾಸ್ ಮನೆಯ ಹಲವರಿಗೆ ಬೇರೆ ಬೇರೆ ರೀತಿಯಾಗಿ ಕ್ಲಾಸ್ ತೆಗೆದುಕೊಂಡರು. ಮಸ್ತಾನ್ ಬಿಗ್‌ಬಾಸ್ ಮನೆಯಿಂದ ನಿನ್ನೆ ಔಟ್ ಆದರು. ಮಸ್ತಾನ್ ಮನೆಯಿಂದ ಹೊರಬರುವ ಸಂದರ್ಭದಲ್ಲಿ ಬಿಗ್‌ಬಾಸ್ ಅವರಿಗೆ ವಿಶೇಷ ಅಧಿಕಾರವೊಂದನ್ನ ನೀಡಿದರು. ಇದರ ಪ್ರಕಾರ ಮಸ್ತಾನ್ ಸೋಚ್ಛಿಸುವ ವ್ಯಕ್ತಿ ಮನೆಯ ಕೆಲಸದಾಳಾಗಿರಬೇಕು. ಕಾರುಣ್ಯರನ್ನು ಸೂಚಿಸಿ ಮಸ್ತಾನ್ ಮನೆಯಿಂದ ಹೊರಬಂದರು.
Comments are closed.