ಬೆಂಗಳೂರು: ಹೊಸಬಾಳಿಗೆ ಕಾಲಿರಿಸಿರುವ ಖ್ಯಾತ ನಟ ಯಶ್ ಹಾಗೂ ರಾಧಿಕಾ ಪಂಡಿತ್ ಅವರು ಅಭಿಮಾನಿಗಳಿಗಾಗಿ ಮತ್ತು ಚಿತ್ರರಂಗದ ಕಾರ್ಮಿಕರಿಗೆ ಭಾನುವಾರ ಔತಣಕೂಟ ಏರ್ಪಡಿಸಿದ್ದು ರಾಜ್ಯದ ಮೂಲೆ ಮೂಲೆಗಳಿಂದ ಸ್ಯಾಂಡಲ್‌ವುಡ್ ಜೋಡಿಯ ಭಾರಿ ಸಂಖ್ಯೆಯ ಅಭಿಮಾನಿಗಳು ಅರಮನೆ ಮೈದಾನದಲ್ಲಿ ಜಮಾಯಿಸಿದ್ದಾರೆ.
ಸುಮಾರು 30 ಸಾವಿರ ಜನರಿಗಾಗಿ ಸಿಹಿ ಊಟದ ವ್ಯವಸ್ಥೆ ಮಾಡಲಾಗಿದ್ದು ಈಗಾಗಲೇ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿರುವ 20 ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ಯಶ್ -ರಾಧಿಕಾಗೆ ಶುಭ ಕೋರಿದ್ದಾರೆ.
ಕಲಾ ನಿರ್ದೇಶಕ ಅರುಣ್ ಸಾಗರ್ ನಿರ್ಮಿಸಿರುವ ಆಕರ್ಷಕ ವೇದಿಕೆಯಲ್ಲಿ ಮಂಡ್ಯದ ಸಾಂಪ್ರದಾಯಿಕ ಉಡುಗೆ ಯಲ್ಲಿ ಕಂಗೊಳಿಸುತ್ತಿರುವ ನವಜೋಡಿ ಅಭಿಮಾನಿಗಳತ್ತ ಕೈಬೀಸುತ್ತಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿಗಳಿರುವ ಕಾರಣ ಯಾರೊಬ್ಬರಿಗೂ ವೇದಿಕೆ ಏರಲು ಅವಕಾಶ ನೀಡಿಲ್ಲ.
ಜನರನ್ನು ನಿಯಂತ್ರಿಸಲು ಭಾರೀ ಸಂಖ್ಯೆಯ ಪೊಲೀಸರನ್ನು ಅರಮನೆ ಮೈದಾನಲ್ಲಿ ನಿಯೋಜಿಸಲಾಗಿದೆ.
Comments are closed.