ಮನೋರಂಜನೆ

ಬಿಗ್ ಬಾಸ್ ನಲ್ಲಿ ಅಕುಲ್ ಬಾಲಾಜಿ, ಶೃತಿ, ಪ್ರಥಮ್ ಒಂದೇ ರೀತಿ ವಿಜೇತರಾದರೆ ವಿಜಯ್ ರಾಘವೇಂದ್ರ ಮಾತ್ರ ಬೇರೆ…!

Pinterest LinkedIn Tumblr

ನಿನ್ನೆಯಷ್ಟೆ ಬಿಗ್ ಬಾಸ್ ಕನ್ನಡ ಸೀಸನ್ 4 ರ ಗೆಲುವಿನ ಪಟ್ಟವನ್ನು ಪ್ರಥಮ್ ಅಲಂಕರಿಸಿದ್ದಾರೆ. ಪ್ರತಿಯೊಂದು ಬಿಗ್ ಬಾಸ್ ಆವೃತ್ತಿಯಲ್ಲೂ ಸ್ಪರ್ಧಿಗಳು, ಟಾಸ್ಕ್ ಹಾಗೂ ಇನ್ನಿತರ ಮನರಂಜನೆಗಳಲ್ಲಿ ಹಲವು ವಿಶೇಷತೆಯಿರುತ್ತದೆ. ವಿವಾದವಿರದ ಬಿಗ್ ಬಾಸ್ ಆವೃತ್ತಿಗಳೆ ಇಲ್ಲ ಎನ್ನಬಹುದು. ಒಂದೊಂದು ಸೀಸನ್’ನಲ್ಲೂ ಯಾವುದಾದರೊಂದು ವಿವಾದ ಮೆತ್ತಿಕೊಂಡೆ ಇರುತ್ತದೆ. ಆದರೆ ಇವೆಲ್ಲವೂ ಮನರಂಜನೆಯ ಭಾಗಗಳಾಗಿವೆ ವಿನಃ ಮತ್ತೇನಿಲ್ಲ.

ಆದರೆ ಬಿಗ್ ಬಾಸ್ 4 ಆವೃತ್ತಿಗಳಲ್ಲಿನ ಮೂರರಲ್ಲಿ ಆಗಿರುವ ವಿಶೇಷವನ್ನು ವೀಕ್ಷಕರು ಗಮನಿಸಿದಂತಿಲ್ಲ. ವಿಜೇತರನ್ನು ಘೋಷಿಸುವುದಕ್ಕೆ ಇಬ್ಬರು ಸ್ಪರ್ಧಿಗಳನ್ನು ನಿರೂಪಕ ಸುದೀಪ್ ಅವರು ವೇದಿಕೆಗೆ ಕರೆತರುತ್ತಾರೆ. ಇಬ್ಬರು ಸುದೀಪ್ ಅವರ ಬಲ ಹಾಗೂ ಎಡಭಾಗ ನಿಂತಿರುತ್ತಾರೆ. ಕೊನೆ ಕ್ಷಣದಲ್ಲಿ ವಿಜೇತರಾದ ಒಬ್ಬರ ಕೈಯನ್ನು ಮೇಲಕ್ಕೆತ್ತುವ ಮೂಲಕ ಸುದೀಪ್ ಟ್ರೋಫಿಯನ್ನು ನೀಡುತ್ತಾರೆ.

4 ಆವೃತ್ತಿಗಳಲ್ಲಿ ಮೊದಲ ಆವೃತ್ತಿಯಲ್ಲಿ ವಿಜೇತರಾತ ವಿಜಯ್ ರಾಘವೇಂದ್ರ ಅವರನ್ನು ಹೊರತುಪಡಿಸಿ ಅಕುಲ್ ಬಾಲಾಜಿ, ಶೃತಿ ಹಾಗೂ ಪ್ರಥಮ್ ಅವರಲ್ಲಿ ಒಂದೇ ಸ್ವಾಮತೆಯಿದೆ. ಈ ಮೂವರು ಸುದೀಪ್ ಅವರ ಎಡಭಾಗದಲ್ಲಿಯೇ ನಿಂತಿರುವುದು. ವಿಜಯ್ ರಾಘವೇಂದ್ರ ಮಾತ್ರ ಬಲ ಭಾಗದಲ್ಲಿ ನಿಂತಿದ್ದರು. ಮೇಲಿನ ಚಿತ್ರವನ್ನು ನೋಡಿದರೆ ಈ ಹೋಲಿಕೆ ಕಾಣುತ್ತದೆ.

Comments are closed.