ಮುಂಬೈ: ಕ್ರಿಕೆಟ್ ಲೋಕದ ಬ್ಯಾಟಿಂಗ್ ದಂತಕತೆ ಹಾಗೂ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಸಚಿನ್ ತೆಂಡುಲ್ಕರ್ ತಮ್ಮ ಜೀವನಾಧಾರಿತ ಬಾಲಿವುಡ್ ಚಿತ್ರ ‘ಸಚಿನ್: ಎ ಬಿಲಿಯನ್ ಡ್ರೀಮ್ಸ್’ ಬಿಡುಗಡೆ ದಿನಾಂಕವನ್ನು ಸ್ವತಃ ಟ್ವಿಟರ್‌ನಲ್ಲಿ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ನಿರೀಕ್ಷೆಗೆ ತೆರೆಯೆಳೆದಿದ್ದಾರೆ.
‘ಎಲ್ಲರೂ ನನ್ನನ್ನು ಕೇಳುತ್ತಿದ್ದ ಪ್ರಶ್ನೆಗೆ ಉತ್ತರಿಸುತ್ತಿದ್ದೇನೆ. ನಿಮ್ಮ ಕ್ಯಾಲೆಂಡರ್‌ನಲ್ಲಿ ಗುರುತು ಹಾಕಿಕೊಳ್ಳಿ. @ಸಚಿನ್ ಚಿತ್ರ ದಿನಾಂಕ 26.05.2017ಕ್ಕೆ ತೆರೆಗೆ ಬರಲಿದೆ’ ಎಂದು ಟ್ವೀಟ್ ಮಾಡಿದ್ದಾರೆ.
ಈ ಮೂಲಕ ಭಾರತೀಯ ಚಿತ್ರರಂಗದಲ್ಲಿ ಹಲವು ನಿರೀಕ್ಷೆಗಳನ್ನು ಮೂಡಿಸಿರುವ ‘ಸಚಿನ್: ಎ ಬಿಲ್ಲಿಯನ್ ಡ್ರೀಮ್ಸ್’ ಸಿನಿಮಾ ಸಚಿನ್ ಅಭಿಮಾನಿಗಳಲ್ಲಿ ಸಂಭ್ರಮ ಉಂಟುಮಾಡಿದೆ.
ಸಚಿನ್ ಅವರ ವೈಯಕ್ತಿಕ ಹಾಗೂ ವೃತ್ತಿ ಬದುಕಿನ ಮೇಲೆ ಬೆಳಕುಚೆಲ್ಲುವ ಈ ಚಿತ್ರದ ಮೊದಲ ಪೋಸ್ಟರ್ ಏಪ್ರಿಲ್ 2016ರಲ್ಲಿ ಬಿಡುಗಡೆಯಾಗಿತ್ತು.
ತೆಂಡುಲ್ಕರ್ 1989ರಲ್ಲಿ, ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಆಡುವ ಮೂಲಕ ತಮ್ಮ 16ನೇ ವಯಸ್ಸಿನಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಟ್ಟು ನೂರು ಶತಕ ಗಳಿಸಿರುವ ಅವರು ಹಲವು ದಾಖಲೆಗಳನ್ನು ತಮ್ಮ ಹೆಸರಿನಲ್ಲಿ ಹೊಂದಿದ್ದಾರೆ.
sachin tendulkar ✔ @sachin_rt
The answer to the question that everyone’s asking me is here. Mark your calendars and save the date. @SachinTheFilm releases 26.05.17
1:19 PM – 13 Feb 2017
5,392 5,392 Retweets 14,275 14,275 likes
ಸದ್ಯ ದೇಶದ ಹೆಸರಾಂತ ಕ್ರೀಡಾಪಟುಗಳಾದ ಮಹೇಂದ್ರ ಸಿಂಗ್ ದೋನಿ, ಮಿಲ್ಖಾಸಿಂಗ್, ಮೇರಿ ಕೋಮ್ ಹಾಗೂ ಮತ್ತಿತರ ಆಟಗಾರರ ಕುರಿತ ಸಿನಿಮಾಗಳು ತೆರೆಗೆ ಬಂದಿದ್ದು, ಆ ಸಾಲಿಗೆ ಸಚಿನ್ ಕುರಿತ ‘ಸಚಿನ್: ಎ ಬಿಲಿಯನ್ ಡ್ರೀಮ್ಸ್’ ಹೊಸ ಸೇರ್ಪಡೆಯಾಗಲಿದೆ.
Comments are closed.