ಮನೋರಂಜನೆ

ಬಾಲಿವುಡ್ ಚೆಲುವೆ ಎವಲಿನ್ ಶರ್ಮಾ ಹಾಟ್ ಶೋ

Pinterest LinkedIn Tumblr


ಇಂಡೋ-ಜರ್ಮನ್ ರೂಪದರ್ಶಿ ಕಮ್ ನಟಿ ಎವಲಿನ್ ಶರ್ಮಾ ಮತ್ತೆ ಚಿತ್ರರಸಿಕರ ಟೆಂಪರೇಚರ್ ಏರಿಸಿದ್ದಾರೆ. ಇತ್ತೀಚೆಗೆ ನಿಯತಕಾಲಿಕೆಯೊಂದಕ್ಕೆ ಕೊಟ್ಟಿರುವ ಅವರ ಭಂಗಿಗೆ ಬಿ-ಟೌನ್‍ನಲ್ಲಿ ಬಿಸಿ ಏರಿಸುತ್ತಿದೆ. ಈಜುಡುಗೆಯಲ್ಲಿರುವ ಸಖತ್ ಹಾಟ್ ಭಂಗಿ ಎಲ್ಲರ ಗಮನಸೆಳೆಯುತ್ತಿದೆ.

ಬಾಲಿವುಡ್‌ನ ಯೇ ಜವಾನಿ ಹೈ ದಿವಾನಿ ಮತ್ತು ನೌಟಂಕಿ ಸಾಲಾ ಚಿತ್ರಗಳಲ್ಲಿ ಎವಲಿನ್ ಬಣ್ಣಹಚ್ಚಿದ್ದಾರೆ. ಕಪ್ಪು ಹೀಲ್ಸ್, ಕಾಡಿಗೆ, ಗಾಢಬಣ್ಣದ ತುಟಿರಂಗು ಎಂತವರನ್ನೂ ಸೆಳೆಯುವಂತಿದೆ. ಈ ಫೋಟೋದಲ್ಲಿ ತಮ್ಮ ಸೌಂದರ್ಯದ ಆಸ್ತಿಯನ್ನು ತೆರೆದಿಟ್ಟಿದ್ದಾರೆ ಎವಲಿನ್.

ಸದ್ಯಕ್ಕೆ ಈ ಬೆಡಗಿ ಮಾಡೆಲಿಂಗ್ ಜತೆಗೆ ಸಿನಿಮಾದಲ್ಲೂ ಬಿಜಿಯಾಗಿದ್ದಾರೆ. ಶಾರುಖ್ ಖಾನ್ ಮತ್ತು ಅನುಷ್ಕಾ ಶರ್ಮಾ ಮುಖ್ಯಭೂಮಿಕೆಯಲ್ಲಿರುವ ’ರಹ್‍ನುಮಾ’ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಚಿತ್ರಕ್ಕೆ ಇಂಮ್ತಿಯಾಜ್ ಅಲಿ ಆಕ್ಷನ್ ಕಟ್ ಹೇಳುತ್ತಿದ್ದಾರೆ.

Comments are closed.