ಸಿಲ್ಕ್ ಸ್ಮಿತಾ ಜೀವನ ಚರಿತ್ರೆಯ ಆಧಾರವಾಗಿ ಮೂಡಿಬಂದ ಡರ್ಟಿ ಫಿಕ್ಚರ್‌ನಲ್ಲಿ ವಿದ್ಯಾ ಬಾಲನ್ ಎಷ್ಟು ಗ್ಲಾಮರ್ ಆಗಿ ಕಾಣಿಸಿಕೊಂಡಿದ್ದರು ಎಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ. ಆ ಚಿತ್ರದಲ್ಲಿನ ಅಭಿನಯಕ್ಕಾಗಿ ವಿದ್ಯಾ ಬಾಲನ್ ರಾಷ್ಟ್ರ ಪ್ರಶಸ್ತಿಗೆ ಭಾಜನರಾದರು.
ಇದೀಗ ಈ ಡರ್ಟಿ ಪಿಕ್ಚರ್ ಬೆಡಗಿ ಮತ್ತೊಂದು ಹಾಟ್ ಚಿತ್ರದಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ಚಿತ್ರದ ಹೆಸರು ಬೇಗಂ ಜಾನ್. ಈ ಸಿನಿಮಾದಲ್ಲಿ ವೇಶ್ಯಾವಾಟಿಕೆಯೊಂದರ ಯಜಮಾನಿಯಾಗಿ ವಿದ್ಯಾ ಕಾಣಿಸಲಿದ್ದಾರೆ. ಹಾಗಾಗಿ ಚಿತ್ರದಲ್ಲಿ ಕುತೂಹಲ ಸಾಕಷ್ಟು ಬೆಳೆದಿದೆ.
ಈ ಚಿತ್ರದಲ್ಲಿ ವಿದ್ಯಾ ಇನ್ನಷ್ಟು ಹಾಟ್ ಆಗಿ ಕಾಣಿಸಲಿದ್ದಾರಾ? ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, ವೇಶ್ಯವಾಟಿಕೆಯಲ್ಲಿನ ವೇಶ್ಯೆಯರು ಹಾಟ್ ಆಗಿ ಇರುತ್ತಾರೆ. ಆದರೆ ಓನರ್ ಹಾಟ್ ಆಗಿ ಇರಬೇಕು ಎಂಬ ರೂಲು ಇಲ್ಲ. ಸಿನಿಮಾದಲ್ಲಿ ನಾನು ಹಾಟ್ ಆಗಿ ಇದ್ದೀನೋ ಇಲ್ಲವೋ ಎಂಬುದನ್ನು ನನ್ನ ಕೇಳಬೇಡಿ. ಅದು ಸದ್ಯಕ್ಕೆ ಸಸ್ಪೆನ್ಸ್ ಎಂದಿದ್ದಾರೆ.
ಆದರೆ ಮೂಲಗಳ ಪ್ರಕಾರ, ವಿದ್ಯಾ ಬಾಲನ್ ಮಾತ್ರ ಸಖತ್ ಹಾಟ್ ಆಗಿದ್ದಾರೆ ಎನ್ನುತ್ತವೆ. ಡರ್ಟಿ ಪಿಕ್ಚರ್‌ನಲ್ಲಿ ಎಷ್ಟು ಹಾಟ್ ಆಗಿ ಇದ್ದರೋ ಇಲ್ಲೂ ಅಷ್ಟೇ ಹಾಟ್ ಎನ್ನುತ್ತಿದ್ದಾರೆ. ಮಹೇಶ್ ಭಟ್, ಮುಕೇಶ್ ಭಟ್ ನಿರ್ಮಾಣದದ್ ಈ ಚಿತ್ರಕ್ಕೆ ಶ್ರೀಜಿತ್ ಮುಖರ್ಜಿ ಆಕ್ಷನ್ ಕಟ್ ಹೇಳುತ್ತಿದ್ದು ಏಪ್ರಿಲ್ 14ಕ್ಕೆ ಚಿತ್ರ ತೆರೆಗೆ ಬರುತ್ತಿದೆ.
Comments are closed.