ತಿಥಿ, ತರ್ಲೆ ವಿಲೇಜ್ ಖ್ಯಾತಿಯ ಗಡ್ಡಪ್ಪ ಈಗ ಬ್ಯುಸಿಯಾಗಿದ್ದಾರೆ, ಈ ಹಿಂದೆ, ಹರಿಶ್ಚಂದ್ರನ ಮಕ್ಕಳು ಎಂಬ ಚಿತ್ರವನ್ನು ನಿರ್ಮಿಸಿದ್ದ ಎಂ.ಸಿ.ಹೇಮಂತ್ ಗೌಡ ಅವರ ಸಂಸ್ಥೆಯಲ್ಲಿ ನಿರ್ಮಾಣವಾಗುತ್ತಿರುವ ಎರಡನೇ ಚಿತ್ರ ಪ್ರೊಡಕ್ಷನ್ ನಂಬರ್-2 ಚಿತ್ರದಲ್ಲಿ ಗಡ್ಡಪ್ಪ ಪ್ರಮುಖ ಪಾತ್ರದಲ್ಲಿ ನಿರ್ವಹಿಸುತ್ತಿದ್ದಾರೆ.
ಕಳೆದ ಶುಕ್ರವಾರ ಚಿತ್ರಕ್ಕೆ ವಡ್ಡರಹಳ್ಳಿಯಲ್ಲಿ ಚಿತ್ರದ ಮುಹೂರ್ತ ನೆರವೇರಿತು. ಹಳ್ಳಿಯ ಇಬ್ಬರು ಗೌಡರ ಗೆಳೆತನ ಒಬ್ಬ ಗೌಡನ ಮಗ, ಮತ್ತೊಬ್ಬ ಗೌಡನ ಮಗಳ ನಡುವಿನ ಗುಂಪುಗಾರಿಕೆ ಜಗಳ ಹೀಗೆ ಸಾಗುವ ಕಥೆಯನ್ನು ಪ್ರಧಾನವಾಗಿಟ್ಟುಕೊಂಡು, ಸಂಪೂರ್ಣ ಮನರಂಜನಾತ್ಮಕ ಚಿತ್ರವನ್ನು ರೂಪಿಸಲಾಗುತ್ತಿದೆ.
ಈ ಚಿತ್ರ ಹಾಸ್ಯದ ಜೊತೆಜೊತೆಗೆ ಪ್ರೀತಿ ಪ್ರೇಮಗಳ ವಿಚಾರಗಳನ್ನೂ ಒಳಗೊಂಡಿದೆ. ಎಸ್.ರಾಜು ಚಟ್ಟನಹಳ್ಳಿ ಕಥೆ, ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಪಿ.ವಿ.ಆರ್.ಸ್ವಾಮಿ ಛಾಯಾಗ್ರಹಣ, ಕಾರ್ತಿಕ್ ಸಂಕಲನ, ಎಂ.ಸಿ.ರೇಣುಕ, ಕೆ.ಮೋಹನ್, ದರ್ಶನ್, ಸಹ ನಿರ್ಮಾಪಕರು.
ಗಡ್ಡಪ್ಪ ವಿಜಯ ಅರವಿಂದ್, ಅನಖಾ, ಜೋಕರ್ ಹನುಮಂತು, ವೆಂಕಟಾಚಲ, ಶಾಲಿನಿ ಸಂತೋಷ್, ಸುಮಂತ್ ಸೂರ್ಯ ದರ್ಶನ್, ವೇಣು, ಕೆ.ಆರ್.ಪೇಟೆ ತಮ್ಮಣ್ಣ, ಸಿದ್ದರಾಜು ಭೂಪಾಲ್, ಮಂಜುನಾಥ್ ಭದ್ರಾವತಿ, ಪಟೇಲ್ ರಂಗಪ್ಪ, ಹೇಮಂತ್‍ಗೌಡ, ಸಂಧ್ಯಾ ಮುಂತಾದವರ ತಾರಾಬಳಗವಿದೆ.
Comments are closed.