ಮನೋರಂಜನೆ

100 ಕ್ಕೂ ಹೆಚ್ಚು ಬಾರಿ ಈ ನಟಿಯನ್ನು ಮಂಚಕ್ಕೆ ಕರೆದಿದ್ರಂತೆ! ಆದರೆ ಈ ನಟಿ ಮಾಡಿದ್ದೇನು…?

Pinterest LinkedIn Tumblr

ಚಿತ್ರಗಳಲ್ಲಿ ಅವಕಾಶಗಳು ಬೇಕಾದ್ರೆ ಮಂಚಕ್ಕೆ ಹತ್ತಲೇ ಬೇಕು ಎನ್ನುವ ಮಾತುಗಳು ಆಗಾಗ ಕೇಳಿ ಬರುತ್ತಿರುತ್ತವೆ. ಚಿತ್ರರಂಗದಲ್ಲಿ ತಾವು ಎದುರಿಸಿರುವ ಮಂಚದ ಕಥೆ ಬಗ್ಗೆ ಈಗಾಗಲೇ ಹಲವು ನಟಿಯರು ಹೇಳಿಕೊಂಡಿದ್ದಾರೆ.

ಇದೀಗ ಮತ್ತೊಬ್ಬ ನಟಿ ಈ ಕುರಿತು ಮಾತನಾಡಿದ್ದಾರೆ. ಭೋಜ್‌ಪುರಿ ನಟಿ ಸಂಚಿತಾ ಬ್ಯಾನರ್ಜಿ ತಾವು ಎದುರಿಸಿದ ಮಂಚದ ಕಥೆ ಬಗ್ಗೆ ಅಳಲು ತೋಡಿಕೊಂಡಿದ್ದಾರೆ. ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಈ ಕುರಿತು ಮಾತನಾಡಿರುವ ಅವರು, ತಾನು 100 ಕ್ಕೂ ಹೆಚ್ಚು ಬಾರಿ ಮಂಚಕ್ಕೆ ಕರೆದಿರುವುದನ್ನು ಫೇಸ್‌ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ. ನನ್ನ ಟ್ಯಾಲೆಂಟ್‌ ಮೇಲೆ ನಂಗೆ ನಂಬಿಕೆ ಇದೆ. ಆದ್ದರಿಂದ ಅಂತಹ ಆಫರ್‌ಗಳನ್ನು ನಾನು ತಿರಸ್ಕರಿಸಿದೆ. ಇದೇ ಕಾರಣಕ್ಕಾಗಿ ಹಲವು ಚಿತ್ರಗಳು ನನ್ನ ಕೈ ಬಿಟ್ಟು ಹೋದವು. ಅವುಗಳ ಬಗ್ಗೆ ನನಗೆ ಬೇಸರವಿಲ್ಲ ಎಂದು ಹೇಳಿದ್ದಾರೆ ಸಂಚಿತಾ.

ಅದರ ಕರಾಳ ಮುಖವನ್ನು ಬಯಲು ಮಾಡಿರುವ ಸಂಚಿತಾ, ಕೆಲ ನಿರ್ಮಾಪಕರು ನನ್ನನ್ನು ಖಾಸಗಿಯಾಗಿ ಭೇಟಿಯಾಗಲು ಬಯಸುತ್ತಿದ್ದರು. ಅವರು ಹೇಳಿದ್ದಕ್ಕೆ ನಾನು ಒಪ್ಪಿಕೊಂಡ್ರೆ ಚಾನ್ಸ್‌ ನೀಡುವುದಾಗಿ ಹೇಳುತ್ತಿದ್ದರು. ಹಾಗೆ ಮಾಡುವುದು ನನಗೆ ಇಷ್ಟವಿರಲಿಲ್ಲ. ಆದ್ದರಿಂದ ಅಂತಹವರನ್ನು ನಾನು ಭೇಟಿಯಾಗುತ್ತಿರಲಿಲ್ಲ ಎಂದು ಸಂಚಿತಾ ಹೇಳಿದ್ದಾರೆ.

ನಂಗೆ ಬಾಲಿವುಡ್‌ನಲ್ಲಿ ಯಾರದೂ ಪರಿಚಯವಿರಲಿಲ್ಲ. ಹೊಸದಾಗಿ ಚಿತ್ರರಂಗಕ್ಕೆ ಬರುವ ನಟಿಯರು ಮಂಚದ ಆಫರ್‌ ಎದುರಿಸಬೇಕಾಗುತ್ತೆ. ಇದನ್ನು ಮೆಟ್ಟಿ ನಿಂತು ಮುನ್ನುಗ್ಗಬೇಕು. ನಮ್ಮ ಪ್ರತಿಭೆಯ ಮೇಲೆ ನಮಗೆ ನಂಬಿಕೆ ಇದ್ದಾಗ ಮಾತ್ರ ಅಂತಹವುಗಳಿಂದ ತಪ್ಪಿಸಿಕೊಳ್ಳಬಹುದು ಎಂಬುದು ಸಂಚಿತಾರ ಅಭಿಪ್ರಾಯ.

Comments are closed.