ಮನೋರಂಜನೆ

ನಟಿ ಪ್ರಿಯಾಂಕ ಚೋಪ್ರ ಫುಲ್ ಗರಂ ಆಗಿದ್ದು ಯಾಕೆ ಗೊತ್ತಾ…?

Pinterest LinkedIn Tumblr


ನವದೆಹಲಿ: ಬಾಲಿವುಡ್ ನ ನಟಿ ಪ್ರಿಯಾಂಕ ಚೋಪ್ರ ಅವರು ಲಿಂಗದ ಆಧಾರದ ಮೇಲೆ ವೇತನ ನೀಡುತ್ತಿರುವುದರ ಕುರಿತು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಫೋರ್ಬ್ಸ್ ಮ್ಯಾಗಜಿನ್ ಇತ್ತೀಚೆಗೆ ಬಿಡುಗಡೆ ಮಾಡಿರುವ ಭಾರತದಲ್ಲಿ ಅತೀ ಹೆಚ್ಚು ಆದಾಯ ಗಳಿಸುವ ತಾರೆಯರ ಪಟ್ಟಿಯಲ್ಲಿ7ನೇ ಸ್ಥಾನ ಪಡೆದುಕೊಡಿರುವ ನಟಿ ಪ್ರಿಯಾಂಕ ಚೋಪ್ರ ಅವರು ಚಿತ್ರರಂಗದಲ್ಲಿ ಪುರುಷರಿಗೆ ಹೆಚ್ಚು ಸಂಭಾವನೆ ನೀಡಿ ಮಹಿಳೆಯರಿಗೆ ಕಡಿಮೆ ಸಂಭಾವನೆ ನೀಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದು ಚಿತ್ರರಂಗದಲ್ಲಿ ಮಾತ್ರವಲ್ಲದೆ ವಾಣಿಜ್ಯ, ಕೈಗಾರಿಕ ವಲಯದಲ್ಲೂ ಕೂಡ ಹೀಗೆ ನಡೆಯುತ್ತಾ ಬಂದಿದೆ. ತನ್ನೊಂದಿಗೆ ದೀಪಿಕಾ ಪಡುಕೋಣೆ, ಕಂಗಾನ, ಅನುಷ್ಕಾ ಶರ್ಮಾ ಅವರು ಕೂಡ ಬಾಲಿವು ಡ್ ನಲ್ಲಿ ಬಹಿರಂಗವಾಗಿ ಈ ಬಗ್ಗೆ ಧ್ವನಿ ಎತ್ತಿದ್ದಾರೆ ಎಂದು ಹೇಳಿದ್ದಾರೆ.

Comments are closed.