ಮುಂಬಯಿ: ಬಾಲಿವುಡ್ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಅವರನ್ನು ಈ ಹಿಂದೆ ಹೆಗಲಿಗಾದ ಹಳೇ ಗಾಯದ ನೋವು ಈಗ ಪುನಃ ಕೆದರಿ ತೀವ್ರವಾಗಿ ಕಾಡುತ್ತಿದೆ.
75 ಹರೆಯದ ಅಮಿತಾಭ್ ತಮ್ಮ ಖಾಸಗಿ ಬ್ಲಾಗ್‌ನಲ್ಲಿ ತಾವೀಗ ತೀವ್ರವಾಗಿ ಅನುಭವಿಸುತ್ತಿರುವ ನೋವಿನ ವೇದನೆಯನ್ನು ತೋಡಿಕೊಂಡಿದ್ದಾರೆ. ಈಚಿನ ಒಂದು ಫಿಲಂ ಸೆಟ್‌ನಲ್ಲಿ ಸ್ವಲ್ಪ ಭಾರದ ವಸ್ತುವನ್ನು ಎತ್ತಿದ ಕಾರಣ ಹಳೇ ಹೆಗಲು ನೋವು ಈಗ ಪುನಃ ಕೆದರಿ ಕಾಡುತ್ತಿದೆ ಎಂದು ಬಚ್ಚನ್ ಹೇಳಿದ್ದಾರೆ.
ಈಗ ಹೆಗಲು ನೋವು ಶಮನಕ್ಕಾಗಿ ಅಮಿತಾಭ್ ಔಷಧಿಗಳ ಮೊರೆ ಹೋಗಿದ್ದು ಪ್ರಕೃತ ಐಸ್ ಕಂಪ್ರಸ್ ಗಳನ್ನು ಬಳಸಿಕೊಂಡು ನೋವು ಕಡಿಮೆ ಮಾಡಲು ಯತ್ನಿಸುತ್ತಿದ್ದಾರೆ.
ಬಹಳ ಹಿಂದೆ ಹೆಗಲಿಗಾದ ಗಾಯದ ನೋವು ಹಳತೇ ಆದರೂ ಈಗ ವಯಸ್ಸಾಗಿರುವುದರಿಂದ ಅದು ಮತ್ತೆ ತನ್ನ ಪ್ರತಾಪವನ್ನು ತೋರಿಸುತ್ತಿದೆ. ಇದು ನಿಜಕ್ಕೂ ಅಸಹನೀಯವಾದ ವೇದನೆ. ಇದರ ಶಮನಕ್ಕೆ ಮದ್ದು ಮಾಡುತ್ತಿದ್ದೇನೆ; ನೋವು ಅಸಹನೀಯವೇ ಆದರೂ ಅಪಾಯಕಾರಿ ಮಟ್ಟವನ್ನು ಅದು ತಲುಪಿಲ್ಲ ಎಂದು ಅಮಿತಾಭ್ ಬರೆದಿದ್ದಾರೆ.
ಅಮಿತಾಭ್ ಅವರ ಮುಂಬರಲಿರುವ ಚಿತ್ರಗಳೆಂದರೆ ಥಗ್ಸ್ ಆಫ್ ಹಿಂದುಸ್ಥಾನ್ ಮತ್ತು 102 ನಾಟೌಟ್. ಇವುಗಳ ಕೆಲವು ಚಿತ್ರಗಳೊಂದಿಗೆ ಹಿಂದಿನ ರಾತ್ರಿ ತಾನು ವಿರಾಟ್ ಕೊಹ್ಲಿ – ಅನುಷ್ಕಾ ಶರ್ಮಾ ಆರತಕ್ಷತೆಯಲ್ಲಿ ಪಾಲ್ಗೊಂಡಾಗ ತೆಗೆಯಲಾದ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ.
Comments are closed.