ಮನೋರಂಜನೆ

ನಟಿ ಪಾರ್ವತಿ ಮೆನನ್ ಗೆ ಅತ್ಯಾಚಾರ, ಆ್ಯಸಿಡ್ ದಾಳಿಯ ಬೆದರಿಕೆ ಹಾಕಿದ್ದ ವ್ಯಕ್ತಿಯ ಬಂಧನ

Pinterest LinkedIn Tumblr

ತಿರುವನಂತಪುರಂ: ದಕ್ಷಿಣ ಭಾರತದ ಖ್ಯಾತ ನಟಿ ಪಾರ್ವತಿ ಮೆನೆನ್ ಗೆ ಸಾಮಾಜಿಕ ಜಾಲತಾಣದಲ್ಲಿ ಅತ್ಯಾಚಾರ, ಆ್ಯಸಿಡ್ ದಾಳಿಗಳಂತಹ ಬೆದರಿಕೆ ಹಾಕುತ್ತಿದ್ದ ವ್ಯಕ್ತಿಯನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.

ಚಿತ್ರೋತ್ಸವ ಒಂದರಲ್ಲಿ ಭಾಗವಹಿಸಿದ್ದ ಪಾರ್ವತಿ ಮಮ್ಮುಟ್ಟಿ ನಟನೆಯ ‘ಕಸಬಾ’ ಚಿತ್ರದ ಸಂಭಾಷಣೆಯೊಂದನ್ನು ವಿರೋಧಿಸಿದ್ದರು, ಚಿತ್ರದಲ್ಲಿರುವ ಸಂಭಾಷಣೆಯು ಮಹಿಳೆಯರನ್ನು ಅವಹೇಳನ ಮಾಡಿದೆ ಎಂದವರು ಹೇಳಿದ್ದರು. ಪಾರ್ವತಿ ಅವರ ಈ ಹೇಳಿಕೆಗೆ ವ್ಯಾಪಕ ಟೀಕೆಗಳು ಎದರಾಗಿದ್ದವು. ಅಲ್ಲದೆ ಸಾಮಾಜಿಕ ಜಾಲತಾಣಜಲ್ಲೂ ಟೀಕೆಗಳು ಬರಲಾರಂಭಿಸಿದ್ದವು. ಅಂತೆಯೇ 23 ವರ್ಷದ ಯುವಕನೊಬ್ಬ ಸಾಮಾಜಿಕ ಜಾಲತಾಣದಲ್ಲಿ ನಟಿ ಪಾರ್ವತಿಗೆ ಅತ್ಯಾಚಾರ ಮತ್ತು ಆ್ಯಸಿಡ್ ದಾಳಿ ಮಾಡುವ ಕುರಿತು ಬೆದರಿಕೆ ಹಾಕಿದ್ದ.

ಇದರಿಂದ ಆಘಾತಕ್ಕೊಳಗಾಗಿದ್ದ ನಟಿ ಪಾರ್ವತಿ ತಿರುವನಂತಪುರ ಪೊಲೀಸರಿಗೆ ದೂರು ನೀಡಿದ್ದರು. ಐಟಿ ಕಾಯ್ದೆಯಡಿ ದೂರು ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ನಡೆಸಿ ಇದೀಗ ಯುವಕನೋರ್ವನನ್ನು ಬಂಧಿಸಿದ್ದಾರೆ. ಬಂಧಿತ ಯುವಕನನ್ನು ಸಿ.ಎಸ್. ಪಿಂಟೋ ಎಂದು ಗುರುತಿಸಲಾಗಿದೆ. ಪ್ರಸ್ತುತ ದುಷ್ಕರ್ಮಿ ಬಂಧನದಿಂದ ನಟಿ ಪಾರ್ವತಿ ನಿಟ್ಟಿಸಿರುವ ಬಿಡುವಂತಾಗಿದೆ.

Comments are closed.