ಬುಧವಾರ ನಡೆದ ಬಿಗ್‌ಬಾಸ್ ಎಪಿಸೋಡ್‌ನಲ್ಲಿ ಕ್ಯಾಪ್ಟನ್ ರಿಯಾಜ್ ಬಿಗ್ ಮನೆಯ ಸದಸ್ಯರಿಗೆ ಒಂದೊಂದು ಪ್ರಶ್ನೆ ಕೇಳಿದರು. ರಿಯಾಜ್ ಎಸೆದ ಪ್ರಶ್ನೆಗೆ ಕೆಲವರು ನೇರವಾಗಿ ಉತ್ತರಿಸಿದರೆ ಇನ್ನು ಕೆಲ ಸ್ಪರ್ಧಿಗಳು ಹಾರಿಕೆಯ ಉತ್ತರ ನೀಡಿ ನುಣುಚಿಕೊಳ್ಳಲು ಪ್ರಯತ್ನಿಸಿದ್ದು ಕಂಡುಬಂದಿತು.
ನಿಮ್ಮ ಆತ್ಮಚರಿತ್ರೆಯನ್ನು ಕಥೆಯಾಗಿ ಬರೆಯುವುದಾದರೆ ಅದಕ್ಕೆ ಏನೆಂದು ಶೀರ್ಷಿಕೆ ನೀಡುತ್ತೀರಿ ಎಂಬ ಮೊದಲ ಪ್ರಶ್ನೆಯನ್ನು ಅನುಪಮಾ ಗೌಡ ಅವರಿಗೆ ಕೇಳಿದರು ರಿಯಾಜ್. ಈ ಪ್ರಶ್ನೆಗೆ ‘ಕಾಫೀ ವಿತ್ ಅನುಪಮಾ’ ಎಂದು ಉತ್ತರಿಸಿದರು ಅನು. ನಂತರ ‘ಯಾವ ಚಿತ್ರದ ಪಾತ್ರ ನಿಮ್ಮನ್ನು ಬಹುವಾಗಿ ಕಾಡಿದ್ದು ಹಾಗೂ ಅವರೊಟ್ಟಿಗೆ ಡೇಟಿಂಗ್ ಹೋಗಬೇಕು ಅನ್ನಿಸಿದ್ದು?’ ಎಂಬ ಪ್ರಶ್ನೆಯನ್ನ ದಿವಾಕರ್‌ಗೆ ಕೆಳಿದರು ರಿಯಾಜ್.
ಇದಕ್ಕೆ ದಿವಾಕರ್ ‘ಚೆಲುವಿನ ಚಿತ್ತಾರ’ ಚಿತ್ರದಲ್ಲಿ ನಟಿ ಅಮೂಲ್ಯ ಅವರ ಪಾತ್ರ ನೋಡಿ ಫಿದಾ ಆದೆ. ಅಮೂಲ್ಯ ಜತೆ ಡೇಟಿಂಗ್ ಹೋಗಲು ಇಷ್ಟಪಡುತ್ತೀನಿ ಎಂದರು. ಇನ್ನು ಚಂದನ್ ಶೆಟ್ಟಿಗೆ ಮನೆಯ ಕ್ಯೂಟೆಸ್ಟ್ ಸದಸ್ಯ ಯಾರು ಎಂಬ ಪ್ರಶ್ನೆ ಕೇಳಿದಾಗ ಶ್ರುತಿ ಎಂದು ಉತ್ತರಿಸಿದರು. ಇತ್ತ ಸೀಕ್ರೆಟ್ ರೂಮ್‌ನಲ್ಲಿ ವಾಸ್ತವ್ಯ ಹೂಡಿರುವ ಜಯ ಶ್ರೀನಿವಾಸನ್ ಮತ್ತು ಸಮೀರ್ ಆಚಾರ್ಯ ಮನೆಯಲ್ಲಿನ ಸ್ಫರ್ದಿಗಳು ನೀಡಿದ ಉತ್ತರಗಳನ್ನ ಕೇಳಿ ಸಿಕ್ಕಾಪಟ್ಟೆ ಎಂಜಾಯ್ ಮಾಡುತ್ತಿದ್ದರು.
Comments are closed.