ಮುಂಬಯಿ: ಆನಂದ್ ಎಲ್ ರಾಯ್ ಜತೆಗೆ ಇದೇ ಮೊದಲ ಬಾರಿಗೆ ಕೂಡಿಕೊಂಡಿರುವ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರು 2018ರ ಹೊಸ ವರ್ಷದ ಮೊದಲ ದಿನದಂದು ತಮ್ಮ ವಿಶಿಷ್ಟವೂ ವಿನೂತನವೂ ಎನಿಸಲಿರುವ “ಝೀರೋ’ ಚಿತ್ರದ ಟೈಟಲ್ ಮತ್ತು ಟೀಸರ್ ಬಿಡುಗಡೆ ಮಾಡಿ ಎಲ್ಲರ ಗಮನವನ್ನು ತಮ್ಮೆಡೆಗೆ ಸೆಳೆದುಕೊಂಡಿದ್ದಾರೆ.
ಅಂದ ಹಾಗೆ ಝೀರೋ ಚಿತ್ರದಲ್ಲಿ ಶಾರುಖ್ ಕುಳ್ಳನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೊಂದು ಕೌತುಕದ ಸಂಗತಿಯಾಗಿದ್ದು ಟೀಸರ್ ನೋಡಿಕೊಂಡೇ ಶಾರುಖ್ ಅವತಾರವನ್ನು ಅಂದಾಜಿಸಬೇಕಾಗಿದೆ. ಈ ಹೊಸ ಚಿತ್ರವು ಅಚ್ಚರಿ ಮತ್ತು ಕೌತುಕದ ರಸಗವಳ ಎನಿಸಲಿದ್ದು ಭಾರೀ ಎನ್ನಬಹುದಾದ ಸ್ಪೆಶಲ್ ಇಫೆಕ್ಟ್ಗಳಿವೆ. ವರ್ಷಾಂತ್ಯ ಡಿಸೆಂಬರ್ 21ರಂದು ಝೀರೋ ಚಿತ್ರ ತೆರೆ ಕಾಣಲಿದೆ.
ದಶಕಗಳ ಹಿಂದೆ ತಮಿಳು ಸೂಪರ್ ಸ್ಟಾರ್ ಕಮಲ ಹಾಸನ್ ಅಪೂರ್ವ ಸಹೋದರರ್‌ಗಳ್ ಚಿತ್ರದಲ್ಲಿ ಸರ್ಕಸ್ ಕುಳ್ಳನಾಗಿ ಅಭಿನಯಿಸಿದ್ದರು. ಆದರೆ ಅದು ಬೇರೆ; ಇದು ಬೇರೆ ಎಂದು ಹೇಳಲೇ ಬೇಕಿದೆ.
ಝೀರೋ ಚಿತ್ರದಲ್ಲಿ ಅನುಷ್ಕಾ ಶರ್ಮಾ ಮತ್ತು ಕತ್ರೀನಾ ಕೈಫ್ ಕೂಡ ಶಾರುಖ್ ಜತೆಗೆ ನಟಿಸುತ್ತಿದ್ದಾರೆ.
-ಉದಯವಾಣಿ
Comments are closed.