ಬೆಂಗಳೂರು: ಯಾವಾಗ ನಟ ಸುದೀಪ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದರೋ, ಆಗಲೇ ಅವರು ರಾಜಕೀಯ ಪ್ರವೇಶಿಸುವ ಬಗ್ಗೆ ಇಲ್ಲಸಲ್ಲದ ಊಹಾಪೋಹಗಳೂ ಹುಟ್ಟಿಕೊಂಡಿದ್ದವು. ಆದರೆ, ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ಸುದೀಪ್ ಅಲ್ಲಗೆಳೆದಿದ್ದರು. ಇದೀಗ ಚುನಾವಣೆಯಲ್ಲಿ ಸ್ಪರ್ಧಿಸದೇ ಹೋದರೂ, ಕಾಂಗ್ರೆಸ್ ಪರ ಸುದೀಪ್ ಹಾಗೂ ದರ್ಶನ್ ಪ್ರಚಾರ ಮಾಡುವುದು ಬಹುತೇಕ ಖಚಿತವಾಗಿದೆ.
ಈ ಬಗ್ಗೆ ಮುಖ್ಯಮಂತ್ರಿ ಆಪ್ತರು ಮಾಹಿತಿ ನೀಡಿದ್ದು, ಕಾಂಗ್ರೆಸ್ ಅಭ್ಯರ್ಥಿಗಳ ಪರ ಸುದೀಪ್ ಅವರೊಂದಿಗೆ, ದರ್ಶನ್ ಸಹ ಪ್ರಚಾರ ಮಾಡುವುದು ಬಹುತೇಕ ಖಚಿತವಾಗಿದೆ.
ಸಿಎಂ ಭೇಟಿ ಮಾಡಿದಾಗದಲೇ, ಸುದೀಪ್ ಈ ಬಗ್ಗೆ ಸ್ಪಷ್ಟ ಪಡಿಸಿದ್ದಾರೆ ಎನ್ನಲಾಗಿದ್ದು, ಮೈಸೂರಿನ ಪ್ರಭಾವಿ ಸಚಿವರೊಂದಿಗೆ ದರ್ಶನ್ ಕೂಡ ಪ್ರಚಾರ ಮಾಡುವುದಾಗಿ ಹೇಳಿದ್ದಾರೆ ಎನ್ನಲಾಗಿದೆ.
ಸಾಮಾಜಿಕ ಜಾಲತಾಣದ ಉಸ್ತುವಾರಿ ವಹಿಸಿರುವ ನಟಿ, ಹಾಗೂ ಮಾಜಿ ಸಂಸದೆ ರಮ್ಯಾ ಅವರಿಗೆ ಕನ್ನಡದ ಸ್ಟಾರ್ ನಟರನ್ನು ಕಾಂಗ್ರೆಸ್ ಪ್ರಚಾರಕ್ಕೆ ಕರೆ ತರುವ ಹೊಣೆ ನೀಡಿದ್ದು, ಈ ನಿಟ್ಟಿನಲ್ಲಿ ಅವರು ಸಕ್ರಿಯರಾಗಿದ್ದಾರೆ ಎನ್ನಲಾಗಿದೆ. ಈಗಾಗಲೇ ಸುದೀಪ್, ದರ್ಶನ್ ಕಾಂಗ್ರೆಸ್ ಪರ ಪ್ರಚಾರ ಮಾಡುವುದು ಖಚಿತವಾಗಿದ್ದು, ಮತ್ತಷ್ಟು ಕನ್ನಡದ ನಟರು ‘ಕೈ’ ಜೋಡಿಸಲಿದ್ದಾರೆ, ಎನ್ನಲಾಗುತ್ತಿದೆ.
Comments are closed.