ಬೆಂಗಳೂರು: ಸ್ಯಾಂಡಲ್‍ವುಡ್ ಹಾಸ್ಯನಟನ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ಹಾಸ್ಯನಟ ತರಂಗ ವಿಶ್ವ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಮಹಿಳಾ ಟೆಕ್ಕಿಯೊಬ್ಬರು ದೂರು ನೀಡಿದ್ದಾರೆ.
ಹಾಸ್ಯನಟ ತರಂಗ ವಿಶ್ವ ಹಾಗೂ ಮಹಿಳೆ ಉತ್ತರಹಳ್ಳಿಯ ಪ್ಯಾಷನ್ ಹೌಸ್ ಅಪಾರ್ಟ್‍ಮೆಂಟ್ ನಲ್ಲಿ ವಾಸವಿದ್ದರು. ಮಹಿಳೆ ತನ್ನ ಮಗಳ ಜೊತೆ ಒಂಟಿಯಾಗಿ ವಾಸವಿದ್ದರು. ಈ ವೇಳೆ ವಿಶ್ವ ಹಾಗೂ ಪುಟ್ಟಸ್ವಾಮಿ ಎಂಬವರು ಮಹಿಳೆಯನ್ನ ಹಿಂಬಾಲಿಸಿ ಕಿರುಕುಳ ನೀಡಿದ್ದಾರೆ ಎಂದು ಮಹಿಳೆ ನಾಲ್ವರ ವಿರುದ್ಧ ಎಫ್‍ಐಅರ್ ದಾಖಲಿಸಿದ್ದಾರೆ.
ಮೊದಲು ಹಾಸ್ಯನಟನ ವಿರುದ್ಧ ದೂರು ದಾಖಲಿಸಲು ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರು ಮೀನಾಮೇಷ ಎಣಿಸಿದ್ದಾರೆ. ಬಳಿಕ ಮಹಿಳೆ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ಕಮೀಷನರ್ ಸೂಚನೆ ಮೇರೆಗೆ ಸಿಕೆ ಅಚ್ಚುಕಟ್ಟು ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
Comments are closed.