ಬೆಂಗಳೂರು: ಬಿಗ್ಬಾಸ್ ಮನೆಯಲ್ಲಿರುವವರಿಗೆ ಹೊರ ಬಂದಾಗ ಸಂಭಾವನೆ ಎಷ್ಟಿರಬಹುದು ಎಂಬ ಕುಳುಹಲಾ ಎಲ್ಲರಲ್ಲಿಯೂ ಇದ್ದೇಇದೆ.
ಬಿಗ್ಬಾಸ್ ಮನೆಯಲ್ಲಿ ಪ್ರಬಲ ಸ್ಪರ್ಧಿ ಎಂದೇ ಗುರುತಿಸಿಕೊಂಡಿದ್ದ ಅನುಪಮಾ ಗೌಡ ಅವರು 14 ನೇ ವಾರಕ್ಕೆ ಮನೆಯಿಂದ ಹೊರಗೆ ಬಂದಿರುವುದು ಗೊತ್ತೇ ಇದೆ.
ಗೆಲುವಿನ ಸಮೀಪ ಹೋಗಿ ಬಿಗ್ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ ಅನುಪಮಾ. ಇವರ ಪಾಲಿಗೆ ಬಿಗ್ಬಾಸ್ ಫೈನಲ್ನ ಬಾಗಿಲು ಮುಚ್ಚಿದಂತಾಗಿದೆ. ಬಿಗ್ ಮನೆಯಲ್ಲಿ ಸುಮಾರು 98 ದಿನಗಳವರೆಗೆ ಇದ್ದು ಹಲವು ಬಾರಿ ಕಣ್ಣೀರು ಹಾಕಿ ಮನೆಯಿಂದ ಹೊರಗೆ ಕಳುಹಿಸಿ ಎಂದಿದ್ದು ಇದೆ.
ಇನ್ನು ಬಿಗ್ಬಾಸ್ ಮನೆಯಿಂದ ಅನುಪಮಾ ಹೊರ ಬರುತ್ತಿದ್ದಂತೆ ಅವರು ಪಡೆದಿರುವ ಸಂಭಾವನೆ ಬಗ್ಗೆ ಮಾತುಕತೆ ನಡೆಯುತ್ತಿದೆ. ಮೂಲಗಳ ಪ್ರಕಾರ ಒಂದು ವಾರಕ್ಕೆ 75 ಸಾವಿರ ಅಂದರೆ ಒಟ್ಟು 98 ದಿನಕ್ಕೆ ಅವರು ಪಡೆದ ಸಂಭಾವನೆ ಬರೋಬ್ಬರಿ 10,50,000 ರೂ.ಗಳಂತೆ. ಆದರೆ, ಅನುಪಮಾ ಪಡೆದ ಸಂಭಾವನೆ ಬಗ್ಗೆ ಈವರೆಗೂ ಅನುಪಮಾ ಆಗಲಿ, ವಾಹಿನಿ ಮುಖ್ಯಸ್ಥರಾಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
Comments are closed.